ವಿದೇಶ

ಸಾರ್ಕ್ ಸಮ್ಮೇಳನಕ್ಕೆ ಜೇಟ್ಲಿ ಗೈರು, ಪರವಾಗಿಲ್ಲ ಎಂದ ಪಾಕ್

Lingaraj Badiger

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಪಾಕಿಸ್ತಾನವೇ ಕಾರಣ ಭಾರತದ ಆರೋಪವನ್ನು ತಳ್ಳಿಹಾಕಿರುವ ಪಾಕ್, ಇಸ್ಲಾಮಾಬಾದ್ ನಲ್ಲಿ ನಡೆದ ಸಾರ್ಕ್ ದೇಶಗಳ ಹಣಕಾಸು ಸಚಿವರ ಸಮ್ಮೇಳನಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹಾಜರಾಗದಿರುವುದು ದೊಡ್ಡ ವಿಚಾರವೇನಲ್ಲ ಎಂದು ಶನಿವಾರ ಹೇಳಿದೆ.

ಭಾರತದ ಹಣಕಾಸು ಸಚಿವರ ಗೈರು ಅಷ್ಟೇನು ಮಹತ್ವದ ಸಂಗತಿ ಅಲ್ಲ ಎಂದು ಪಾಕಿಸ್ತಾನ ಹಣಕಾಸು ಸಚಿವ ಇಸ್ತಾಖ್ ದಾರ್ ಅವರು 8ನೇ ಸಾರ್ಕ್ ಹಣಕಾಸು ಸಚಿವರ ಸಮ್ಮೇಳನ ಅಂತ್ಯಗೊಂಡ ನಂತರ ಹೇಳಿದ್ದಾರೆ.

ಎಂಟು ಸದಸ್ಯ ರಾಷ್ಟ್ರಗಳಾದ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ್, ಪಾಕಿಸ್ತಾನ ಮತ್ತು ಶ್ರೀಲಂಕಾ ಪೈಕಿ ನಾಲ್ಕು ರಾಷ್ಟ್ರಗಳು ಭಾರತ, ಅಫ್ಗಾನಿಸ್ತಾನ, ಬಾಂಗ್ಲಾದೇಶ ಹಾಗೂ ಮಾಲ್ಡೀವ್ಸ್ ಹಣಕಾಸು ಸಚಿವರು ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸಿರಲಿಲ್ಲ. ಉಪ ಸಚಿವರು ಹಾಗೂ ಅಧಿಕಾರಿಗಳು ಈ ದೇಶಗಳನ್ನು ಪ್ರತಿನಿಧಿಸಿದ್ದರು.

ಭಾರತದ ಪರವಾಗಿ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಶಶಿಕಾಂತ್ ದಾಸ್ ಅವರು ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಅಪ್ಘಾನಿಸ್ತಾನ ಹಣಕಾಸು ಸಚಿವರು ಆಗಮಿಸುತ್ತಿದ್ದರು. ಆದರೆ ಕಾಬೂಲ್ ನಲ್ಲಿರುವ ಅಮೆರಿಕದ ವಿವಿ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಅವರು ಕೊನೆ ಗಳಿಗೆಯಲ್ಲಿ ಪಾಕ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ದಾರ್ ತಿಳಿಸಿದ್ದಾರೆ.

SCROLL FOR NEXT