ಸಿಡ್ನಿ: ಆಸ್ಟ್ರೇಲಿಯಾದ ಫೆಸಿಫಿಕ್ ಸಮುದ್ರದ ಸೊಲೊಮನ್ ದ್ವೀಪಸಮೂಹದಲ್ಲಿ ಪ್ರಭಲ ಭೂಕಂಪನ ಸಂಭವಿಸಿದ್ದು, ಹವಮಾನ ಇಲಾಖೆ ಸುನಾಮಿ ಸಂಭವಿಸುವ ಕುರಿತು ಎಚ್ಚರಿಕೆ ರವಾನಿಸಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 7.7ರಷ್ಟು ದಾಖಲಾಗಿದ್ದು, ಕರಾವಳಿಯಲ್ಲಿರುವ ಗ್ರಾಮಸ್ಥರು ಕೂಡಲೇ ಎತ್ತರ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಹವಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಬಲ ಭೂಕಂಪನ ಸಂಭವಿಸಿದ ಬೆನ್ನಲ್ಲೇ 6.5 ತೀವ್ರತೆಯ ಕಂಪನಗಳು ಸಂಭವಿಸಿದ್ದು, ಫೆಸಿಫಿಕ್ ಸುನಾಮಿ ಎಚ್ಚರಿಕಾ ಕೇಂದ್ರ ಸುನಾಮಿ ಎಚ್ಚರಿಕೆ ರವಾನಿಸಿದೆ. ಆದರೆ ಈ ವರೆಗೂ ಯಾವುದೇ ಗಂಭೀರ ಹಾನಿಯಾಗಿರುವ ಮಾಹಿತಿಗಳು ಲಭ್ಯವಾಗಿಲ್ಲ.
ಸೊಲೊಮನ್ ದ್ವೀಪಸಮೂಹದ ಪಶ್ಚಿಮ ಕಿರಕಿರಾ ದ್ವೀಪದ ಸುಮಾರು 62 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಸೊಲೊಮನ್ ದ್ವೀಪಸಮೂಹದಲ್ಲಿ ವಿದ್ಯುತ್ ಸಂಪರ್ಕ ಬಹುತೇಕ ಕಡಿತಗೊಂಡಿದೆ. ದ್ವೀಪದಲ್ಲಿ ಹಲವು ಕಟ್ಟಡಗಳು ಕುಸಿದಿರುವ ಕುರಿತು ಮಾಹಿತಿ ಲಭ್ಯವಾಗಿದೆಯಾದರೂ, ಅವಘಡದಲ್ಲಿ ಗಾಯಗೊಂಡಿರುವವರ ಕುರಿತು ಈ ವರೆಗೂ ಮಾಹಿತಿ ಲಭ್ಯವಾಗಿಲ್ಲ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.