ಸಾಂದರ್ಭಿಕ ಚಿತ್ರ 
ವಿದೇಶ

ನೈಜೆರಿಯಾದಲ್ಲಿ ಬಾಂಬ್ ಸ್ಫೋಟ: 10 ಸಾವು

ಈಶಾನ್ಯ ನೈಜೆರಿಯಾದ ಮದಗಲಿ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಶುಕ್ರವಾರ ಅವಳಿ ಬಾಂಬ್ ಸ್ಫೋಟಗೊಂಡಿದ್ದು, ಸ್ಫೋಟದಲ್ಲಿ...

ಯೋಲ: ಈಶಾನ್ಯ ನೈಜೆರಿಯಾದ ಮದಗಲಿ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಶುಕ್ರವಾರ ಅವಳಿ ಬಾಂಬ್ ಸ್ಫೋಟಗೊಂಡಿದ್ದು, ಸ್ಫೋಟದಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಅವಳಿ ಬಾಂಬ್ ಸ್ಫೋಟಗೊಂಡಿದ್ದು, ದಾಳಿಯ ಹಿಂದೆ ಬೋಕೋ ಹರಾಮ್ ಇಸ್ಲಾಮಿಕ್ ಉಗ್ರವಾದಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.
ತರಕಾರಿ ಮಾರುಕಟ್ಟೆಯ ಎದುರಗಡೆ ಏಕಕಾಲಕ್ಕೆ ಎರಡು ಬಾಂಬ್ ಗಳು ಸ್ಫೋಟಗೊಂಡಿವೆ ಎಂದು ಘಟನೆಯಲ್ಲಿ ಗಾಯಗೊಂಡು ಪ್ರಾಣಪಯದಿಂದ ಪಾರಾಗಿರುವ ಪ್ರತ್ಯಕ್ಷದರ್ಶಿ ಅಹ್ಮದು ಗುಲಕ್ ಅವರು ತಿಳಿಸಿದ್ದಾರೆ. ಅಲ್ಲದೆ ತಾನು 10 ಮೃತದೇಹಗಳನ್ನು ಕೌಂಟ್ ಮಾಡಿರುವುದಾಗಿ ಹೇಳಿದ್ದಾರೆ.
ಬಾಂಬ್ ಸ್ಫೋಟವನ್ನು ಖಚಿತಪಡಿಸಿರುವ ಪೊಲೀಸ್ ವಕ್ತಾರ ಒತ್ಮಾನ್ ಅಬುಬಕರ್ ಅವರು, ಸಾವಿನ ಸಂಖ್ಯೆ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೋಟ್ ಚೋರಿ’ ಸಂವಿಧಾನದ ಮೇಲಿನ ನೇರ ದಾಳಿ; BJP, RSS, ECಯಿಂದ ದೇಶದ್ರೋಹ, ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ಚುನಾವಣಾ ಆಯೋಗದಲ್ಲಿ ಆಂತರಿಕ ಬಿಕ್ಕಟ್ಟು? ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು! ಸುಪ್ರೀಂ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಆಗ್ರಹ

EC ಬಿಕ್ಕಟ್ಟು: ಜ್ಞಾನೇಶ್ ಕುಮಾರ್ ವಿರುದ್ಧ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬೇಕು; ವಿಫಲವಾದರೆ ಸೇನೆ ಮಧ್ಯಪ್ರವೇಶಿಸಲಿ-Sanjay Raut

ಮೀರಾಬಾಯಿ ಚಾನುಗೆ ಬೆಳ್ಳಿ: 98ರ ಬಳಿಕ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಮೊದಲ ಪದಕ!

Asian Games 2026: ಭಾರತಕ್ಕೆ ಶೂಟಿಂಗ್‌ನಿಂದ ಮತ್ತೊಂದು ಪದಕ; ಪುರುಷರ ಸ್ಕೀಟ್ ತಂಡಕ್ಕೆ ಕಂಚು