ಇನ್ ಸ್ಟಾಗ್ರಾಮ್ ಚಿತ್ರ 
ವಿದೇಶ

ಗಗನ ಚುಂಬಿ ಕಟ್ಟಡದ ತುತ್ತತುದಿಯಲ್ಲಿ ನಿಂತು ಕಾಫಿ ಹೀರಿದ ದುಬೈ ಯುವರಾಜ; ವೈರಲ್ ಆಯ್ತು ವಿಡಿಯೋ

ಗಗನ ಚುಂಬಿ ಕಟ್ಟಡಗಳಿಂದಲೇ ವಿಶ್ವಾದ್ಯಂತ ಖ್ಯಾತಿ ಪಡೆದಿರುವ ದುಬೈ ಮತ್ತೆ ಸುದ್ದಿಯಲ್ಲಿದ್ದು, ದುಬೈನ ಯುವರಾಜ ಗಗನತುಂಬಿ ಕಟ್ಟಡವೊಂದರ ತುತ್ತತುದಿಯಲ್ಲಿ ನಿಂತು ಕಾಫಿ ಹೀರಿದ ವಿಡಿಯೋ ಇದೀಗ ವೈರಲ್ ಆಗಿದೆ.

ದುಬೈ: ಗಗನ ಚುಂಬಿ ಕಟ್ಟಡಗಳಿಂದಲೇ ವಿಶ್ವಾದ್ಯಂತ ಖ್ಯಾತಿ ಪಡೆದಿರುವ ದುಬೈ ಮತ್ತೆ ಸುದ್ದಿಯಲ್ಲಿದ್ದು, ದುಬೈನ ಯುವರಾಜ ಗಗನತುಂಬಿ ಕಟ್ಟಡವೊಂದರ ತುತ್ತತುದಿಯಲ್ಲಿ ನಿಂತು ಕಾಫಿ ಹೀರಿದ ವಿಡಿಯೋ ಇದೀಗ ವೈರಲ್  ಆಗಿದೆ.

ದುಬೈನ ಯುವರಾಜ ಹಮ್ದನ್ ಬಿನ್ ಮೊಹಮದ್ ಅಲ್ ಮಕ್ತೌಮ್ ಇತ್ತೀಚೆಗೆ ದುಬೈನ ಗಗನಚುಂಬಿ ಕಟ್ಟದ ಮೇಲೆ ನಿಂತು ಕಾಫಿ ಹೀರುತ್ತಾ ವಿಡಿಯೊವೊಂದನ್ನು ಸೆರೆ ಹಿಡಿದಿದ್ದಾರೆ. ಅತ್ಯಂತ ಅಪಾಯಕಾರಿಯಾಗಿದ್ದ ಈ  ಪ್ರಕ್ರಿಯೆಯಲ್ಲಿ ಯುವರಾಜ ಹಮ್ದನ್ ಬಿನ್ ಮೊಹಮದ್ ಅಲ್ ಮಕ್ತೌಮ್ ದುಬೈನ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿದಿದ್ದಾರೆ. ಈ ವಿಡಿಯೋದಲ್ಲಿ ದುಬೈನ ಅತ್ಯಾಕರ್ಷಕ ಬುರ್ಜ್ ಖಲೀಫಾ ಸೇರಿದಂತೆ ಹಲವು ಗಗನಚುಂಬಿ  ಕಟ್ಟಡಗಳು ಸೆರೆಯಾಗಿದ್ದು, ಮೋಡದ ಮರೆಯಲ್ಲಿ ಇದ್ದೇವೆಯೇನೋ ಮತ್ತು ಸ್ವರ್ಗದ ಹತ್ತಿರ ಬಂದಿದ್ದೇವೆಯೇನೋ ಎಂಬಂತಹ ಅನುಭವವನ್ನು ನೀಡುತ್ತದೆ.

ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಸೇರಿದಂತೆ ಅದರ ಸುತ್ತಮುತ್ತಲಿನ ಗಗನ ಚುಂಬಿ ಕಟ್ಡಗಳು ವಿಡಿಯೋದಲ್ಲಿ ಸೆರೆಯಾಗಿವೆ. ವಿಡಿಯೋವನ್ನು ನೋಡುತ್ತಿದ್ದರೆ ಸ್ವರ್ಗದಲ್ಲಿ ತೇಲುತ್ತಿರುವ ಅನುಭವ ನೀಡುತ್ತದೆ.  ದುಬೈನಗರ ಮೋಡದಲ್ಲಿ ತೇಲುತ್ತಿದೆಯೆನೋ ಎಂಬ ಭಾವನೆ ಮೂಡುತ್ತದೆ. ಡಿಸೆಂಬರ್ 6ರಂದು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಈ ವೆರೆಗೂ ಈ ವಿಡಿಯೋವನ್ನು ಸುಮಾರು 8.1ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ.  ಅಂತೆಯೇ 2.7 ಲಕ್ಷ ಮಂದಿ ಲೈಕ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

SCROLL FOR NEXT