ಬರ್ಲಿನ್: ಬರ್ಲಿನ್ ನ ಕ್ರಿಸ್'ಮಸ್ ಮಾರುಕಟ್ಟೆ ಮೇಲೆ ಟ್ರಕ್ ದಾಳಿ ನಡೆಸಿದ್ದು ಇಸಿಸ್ ಉಗ್ರ ಸಂಘಟನೆ ಎಂದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಸುದ್ದಿ ಸಂಸ್ಥೆಯೊಂದು ಹೇಳಿದೆ.
ಬರ್ಲಿನ್ ಟ್ರಕ್ ದಾಳಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿರುವ ಇಸಿಸ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಸುದ್ದಿ ಸಂಸ್ಥೆ, ನಾಗರೀಕರನ್ನು ಗುರಿಯಾಗಿರಿಸಿಕೊಂಡು ಇಸಿಸ್ ಉಗ್ರ ಸಂಘಟನೆ ಟ್ರಕ್ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ.
ನಿನ್ನೆಯಷ್ಟೇ ಬರ್ಲಿನ್ ಕ್ರಿಸ್ ಮಸ್ ಮಾರುಕಟ್ಟೆಯಲ್ಲಿ ವೇಗವಾಗಿ ಬರುತ್ತಿದ್ದ ಟ್ರಕ್ ವೊಂದು ಜನನಿ ಬಿಡ ಪ್ರದೇಶದ ಮೇಲೆ ದಾಳಿ ಮಾಡಿತ್ತು.
ಕ್ರಿಸ್ ಮಸ್ ಹಬ್ಬ ಹತ್ತಿರ ಬರುತ್ತಿದ್ದು, ಐಕೋನಿಕ್ ಕೈಸರ್ ವಿಲ್ಹೆಲ್ಮ್ ಮೆಮೋರಿಯಲ್ ಚರ್ಚ್ ಬಳಿರುವ ಕ್ರಿಸ್'ಮಸ್ ಮಾರುಕಟ್ಟೆ ರಸ್ತೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಜನನಿಬಿಡ ಪ್ರದೇಶದ ಮೇಲೆ ಉಗ್ರರು ಟ್ರಕ್ ನುಗ್ಗಿಸಿದ್ದರು. ಪರಿಣಾಮ ಸ್ಥಳದಲ್ಲಿ 9 ಮಂದಿ ಸಾವನ್ನಪ್ಪಿ, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರು.
ಬ್ರೈಟ್ಸಚೀಡ್ ಪ್ಲಾಟ್ಜಾ ನಗರದ ಬಳಿ ಘಟನೆ ನಡೆಸಿದ್ದು, ಪ್ರಕರಣ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿದ್ದ ಅಲ್ಲಿನ ಅಧಿಕಾರಿಗಳು ವಿಚಾರಣೆ ಬಳಿಕ ಆತನನ್ನು ಬಿಡುಗಡೆಗೊಳಿಸಿದ್ದರು.