ವಿದೇಶ

ಇಸ್ರೇಲ್ ವಿರುದ್ಧದ ವಿಶ್ವಸಂಸ್ಥೆ ನಿರ್ಣಯಕ್ಕೆ ಒಬಾಮ ಬೆಂಬಲ

Srinivas Rao BV
ವಿಶ್ವಸಂಸ್ಥೆ: ಪ್ಯಾಲೆಸ್ಟೇನ್ ಆಕ್ರಮಿತ ಪ್ರದೇಶದಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿರುವ ಇಸ್ರೇಲ್ ವಿರುದ್ಧದ ವಿಶ್ವಸಂಸ್ಥೆ ನಿರ್ಣಯವನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬೆಂಬಲಿಸಿದ್ದು, ಇಸ್ರೇಲ್ ಅಮೆರಿಕ ನಡೆಯನ್ನು ಅವಮಾನಕಾರಿ ಎಂದು ಬೇಸರ ವ್ಯಕ್ತಪಡಿಸಿದೆ. 
 ವೆಸ್ಟ್ ಬ್ಯಾಂಕ್ ಹಾಗೂ ಪೂರ್ವ ಜರುಸಲೇಮ್ ಗಳಲ್ಲಿ ಇಸ್ರೇಲ್ ತನ್ನ ನೆಲೆಯನ್ನು ಸ್ಥಾಪಿಸಿದ್ದ ಇಸ್ರೇಲ್ ಕ್ರಮವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡಿಸಿತ್ತು. ವಿಶ್ವಸಂಸ್ಥೆ ನಿರ್ಣಯದ ವಿರುದ್ಧ ವೆಟೋ ಅಧಿಕಾರವನ್ನು ಬಳಕೆ ಮಾಡಲು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಯಸಿದ್ದರೆ ಬರಾಕ್ ಒಬಾಮ ಆಡಳಿತ ಇಸ್ರೇಲ್ ವಿರುದ್ಧದ ನಿರ್ಣಯವನ್ನು ವಿರೋಧಿಸಿ ವೆಟೋ ಅಧಿಕಾರ ಬಳಸಲು ನಿರಾಕರಿಸಿದ್ದು ಇಸ್ರೇಲ್ ವಿರುದ್ಧದ ನಿರ್ಣಯವನ್ನು ಬೆಂಬಲಿಸಿದ್ದಾರೆ. 
ವಿಶ್ವಸಂಸ್ಥೆ ನಿರ್ಣಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಯುಎನ್ಎಸ್ ಸಿ ಬೇಡಿಕೆಗಳನ್ನು ಒಪ್ಪುವುದಿಲ್ಲ, ಅಂತೆಯೇ ವೆಸ್ಟ್ ಬ್ಯಾಂಕ್ ಹಾಗೂ ಪೂರ್ವ ಜರುಸಲೇಮ್ ಗಳಲ್ಲಿ ನೆಲೆಯನ್ನು  ಸ್ಥಾಪಿಸಲಾಗುತ್ತಿರುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯ ನಿರ್ಣಯವನ್ನು ಇಸ್ರೇಲ್ ತಿರಸ್ಕರಿಸುತ್ತದೆ, ಭದ್ರತಾ ಮಂಡಳಿಯ ನಿಯಮಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಪ್ರಧಾನಿ ಕಾರ್ಯಾಲಯ ಸ್ಪಷ್ಟಪಡಿಸಿದೆ. 
SCROLL FOR NEXT