ಪರ್ಲ್ ಹಾರ್ಬರ್ ಭೇಟಿ ವೇಳೆ ಕ್ಷಮೆ ಕೇಳದ ಜಪಾನ್ ಪ್ರಧಾನಿ ಶಿಂಜೋ ಅಬೆ
ಜಪಾನ್ ಪ್ರಧಾನಿ ಶಿಂಜೋ ಅಬೆ ಡಿ.27 ರಂದು ಪರ್ಲ್ ಹಾರ್ಬರ್ ಗೆ ಭೇಟಿ ನೀಡಿದ್ದು, ಎರಡನೇ ವಿಶ್ವಯುದ್ಧದ ವೇಳೆ ಜಪಾನ್ ಅಮೆರಿಕದ ಮೇಲೆ ದಾಳಿ ನಡೆಸಿ ಯೋಧರನ್ನು ಹತ್ಯೆ ಮಾಡಿದ್ದ ಘಟನೆಗೆ ಕ್ಷಮೆ ಕೇಳಿಲ್ಲ.
ವಾಷಿಂಗ್ ಟನ್: ಜಪಾನ್ ಪ್ರಧಾನಿ ಶಿಂಜೋ ಅಬೆ ಡಿ.27 ರಂದು ಪರ್ಲ್ ಹಾರ್ಬರ್ ಗೆ ಭೇಟಿ ನೀಡಿದ್ದು, ಎರಡನೇ ವಿಶ್ವಯುದ್ಧದ ವೇಳೆ ಜಪಾನ್ ಅಮೆರಿಕದ ಮೇಲೆ ದಾಳಿ ನಡೆಸಿ ಯೋಧರನ್ನು ಹತ್ಯೆ ಮಾಡಿದ್ದ ಘಟನೆಗೆ ಕ್ಷಮೆ ಕೇಳಿಲ್ಲ.
ಅಮೆರಿಕದೊಂದಿಗಿನ ಸಂಬಂಧದ ಮರುಬೆಸುಗೆಗಾಗಿ ಜಪಾನ್ ಪ್ರಧಾನಿ ಶಿಂಜೋ ಅಬೆ ಪರ್ಲ್ ಹಾರ್ಬರ್ ಗೆ ಭೇಟಿ ನೀಡಿದ್ದರು ಎಂದು ಅಬೆ ಅವರ ಸರ್ಕಾರ ಸ್ಪಷ್ಟನೆ ನೀಡಿದ್ದು, ಭೇಟಿ ನಿಗದಿಯಾದಾಗಲೇ ತಾವು ಪರ್ಲ್ ಹಾರ್ಬರ್ ಘಟನೆಗೆ ಕ್ಷಮೆ ಕೋರುವುದಿಲ್ಲ ಎಂದು ಶಿಂಜೋ ಅಬೆ ಸ್ಪಷ್ಟಪಡಿಸಿದ್ದರು.
ಪರ್ಲ್ ಹಾರ್ಬರ್ ಸ್ಮಾರಕದ ಬಳಿ ನಿಂತಾಗ ಅಕ್ಷರಸಹ ಮೂಕನಾಗಿದ್ದಾಗಿ ಜಪಾನ್ ಪ್ರಧಾನಿ ಶಿಂಜೋ ಅಬೆ ತಿಳಿಸಿದ್ದು, ಅಮೆರಿಕ-ಜಪಾನ್ ಎರಡನೇ ಯುದ್ಧದ ವೇಳೆ ನಡೆಸಿದ ತೀವ್ರವಾದ ಯುದ್ಧ ಮಾನವ ಇತಿಹಾಸದ ಕಥಾನಕದಲ್ಲಿ ಎಂದಿಗೂ ಉಳಿಯಲಿದೆ ಎಂದು ಹೇಳಿದ್ದಾರೆ.
ಎರಡನೇ ವಿಶ್ವ ಯುದ್ಧದ ವೇಳೆ 1941 ರ ಡಿ.7 ರಂದು ಜಪಾನ್ ಪರ್ಲ್ ಹಾರ್ಬರ್ ಮೇಲೆ ನಡೆಸಿದ್ದ ದಾಳಿಯಲ್ಲಿ 2,403 ಅಮೆರಿಕನ್ನರನ್ನು ಹತ್ಯೆ ಮಾಡಲಾಗಿತ್ತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.