ವಿದೇಶ

ವಿಶ್ವಬ್ಯಾಂಕಿನ ಕಾರ್ಯತಂತ್ರ ನಾಯಕತ್ವ ಹುದ್ದೆ ವಹಿಸಿದ ಸರೋಜ್ ಕುಮಾರ್ ಜ್ಹಾ

Sumana Upadhyaya

ವಾಷಿಂಗ್ಟನ್: ಸೂಕ್ಷ್ಮ, ಸಂಘರ್ಷ ಮತ್ತು ಹಿಂಸೆಯ ಸವಾಲುಗಳನ್ನು ಎದುರಿಸಲು ಕಾರ್ಯತಂತ್ರ ನಾಯಕತ್ವ ವಹಿಸಲು ಭಾರತ ಮೂಲದ ಸರೋಜ್ ಕುಮಾರ್ ಜ್ಹಾ ಅವರನ್ನು ಪ್ರಮುಖ ಹುದ್ದೆಯೊಂದಕ್ಕೆ ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯೋಂಗ್ ಕಿಮ್ ನೇಮಕ ಮಾಡಿದ್ದಾರೆ.

ಸರೋಜ್ ಕುಮಾರ್ ಜ್ಹಾ ಅವರು ಸೂಕ್ಷ್ಮ, ಸಂಘರ್ಷ ಮತ್ತು ಹಿಂಸೆ ನಿವಾರಣೆ ಗುಂಪಿನ ಹಿರಿಯ ನಿರ್ದೇಶಕರಾಗಿ ನಿನ್ನೆ ಅಧಿಕಾರ ಸ್ವೀಕರಿಸಿಕೊಂಡರು. ಜ್ಹಾ ಅವರು ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ. ಅವರು ಕಳೆದ ವಾರದವರೆಗೆ ವಿಶ್ವಬ್ಯಾಂಕಿನ ದಕ್ಷಿಣ ಏಷ್ಯಾ ವಿಭಾಗದ ಪ್ರಾದೇಶಿಕ ನಿರ್ದೇಶಕರಾಗಿದ್ದರು.

ಜ್ಹಾ ಅವರು 2005ರಲ್ಲಿ ವಿಶ್ವಬ್ಯಾಂಕಿನಲ್ಲಿ ಸುಸ್ಥಿರ ಅಭಿವೃದ್ಧಿ ಸಂಪರ್ಕಜಾಲದ ಹಿರಿಯ ಮೂಲಭೂತ ತಜ್ಞರಾಗಿ ಸೇವೆಗೆ ಸೇರಿದ್ದರು.

SCROLL FOR NEXT