ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಮೊದಲ ಬಾರಿಗೆ ಅಮೆರಿಕದ ಮಸೀದಿಯೊಂದಕ್ಕೆ ಭೇಟಿ ನೀಡಿದ ಬರಾಕ್ ಒಬಾಮ, ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ಖಂಡಿಸಿದ್ದಾರೆ.
ಬಾಲ್ಟಿಮೋರ್ ಇಸ್ಲಾಮಿಕ್ ಸಮಾಜವನ್ನುದ್ದೇಶಿಸಿ ಮಾತನಾಡಿರುವ ಬರಾಕ್ ಒಬಾಮ, ಮುಸ್ಲಿಮರೆಡೆಗೆ ಸಹಿಷ್ಣುಗಳಾಗಿರಬೇಕು ಎಂದು ದೇಶದ ಜನತೆಗೆ ಮನವಿ ಮಾಡಿದ್ದು, ಸಹಿಸಲು ಸಾಧ್ಯವಾಗದ ರೀತಿಯಲ್ಲಿ ಕೆಲವೊಂದು ಮುಸ್ಲಿಂ ವಿರೋಧಿ ಹೇಳಿಕೆಗಳು ಕೇಳಿಬರುತ್ತಿವೆ. ಇಂತಹ ಹೇಳಿಕೆಗಳಿಗೆ ದೇಶದಲ್ಲಿ ಜಾಗವಿಲ್ಲ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜನರು ಭಯೋತ್ಪಾದನೆಯ ಭಯಾನಕ ಕೃತ್ಯಗಳನ್ನು ಎದುರಿಸುತ್ತಿದ್ದು 9 /11 ದಾಳಿಯ ನಂತರ ಮುಸ್ಲಿಂ ವಿರೋಧಿ ಹೇಳಿಕೆಗಳು ಕೇಳಿಬರುತ್ತಿವೆ ಎಂದು ಒಬಾಮ ಹೇಳಿದ್ದಾರೆ.