ನ್ಯೂ ಹ್ಯಾಂಪ್ ಷೈರ್: ನೀವು ಅಮೆರಿಕಾಗೆ ಬರಲು ಸಾಧ್ಯವಿಲ್ಲವೆಂದು ಸಿರಿಯಾ ನಿರಾಶ್ರಿತ ಮಕ್ಕಳಿಗೆ ನೇರವಾಗಿ ಹೇಳುತ್ತೇನೆ ಎಂದು ಅಧ್ಯಕ್ಷೀಯ ಚುನಾವಣಾ ಆಕಾಂಕ್ಷಿ, ರಿಪಬ್ಲಿಕನ್ ಪಕ್ಷದ ಉಮೇದುವಾರ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮುಸ್ಲಿಮರಿಗೆ ಅಮೆರಿಕ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಹೇಳುವ ಮೂಲಕ ಡೋನಾಲ್ಸ್ ಟ್ರಂಪ್ ವಿವಾದಕ್ಕೆ ಸಿಲುಕಿದ್ದರು. ಇದರ ಬೆನ್ನಲ್ಲೇ, ಟ್ರಂಪ್, ಸಿರಿಯಾ ನಿರಾಶ್ರಿತ ಮಕ್ಕಳಿಗೆ ನೀವು ಅಮೆರಿಕಾಗೆ ಬರಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಲು ಇಚ್ಛಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಅಮೆರಿಕಾಗೆ ಮುಸ್ಲಿಂ ಪ್ರವೇಶ ನಿಷೇಧಿಸಬೇಕು. ಇಲ್ಲವಾದರೆ, ದಾಳಿಗಳು ನಡೆಯುತ್ತಲೇ ಇರುತ್ತವೆ ಎಂದು ಅವರು ತಿಳಿಸಿದ್ದರು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.