ವಿದೇಶ

ಮೆಟ್ರೋ ಮಾರ್ಗಕ್ಕಾಗಿ ಲಾಹೋರ್ ನಲ್ಲಿ ಐತಿಹಾಸಿಕ ಜೈನ ದೇವಾಲಯ ನೆಲಸಮ

Srinivas Rao BV

ಲಾಹೋರ್: ಲಾಹೋರ್ ನಲ್ಲಿ ಐತಿಹಾಸಿಕ ಜೈನ ದೇವಾಲಯವೊಂದನ್ನು ನೆಲಸಮಗೊಳಿಸಲಾಗಿರುವುದನ್ನು ವಿರೋಧಿಸಿ ಹಲವು ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿವೆ.
ಆರೆಂಜ್ ಲೈನ್ ಮೆಟ್ರೊ ರೈಲು ಮಾರ್ಗಕ್ಕೆ ಜೈನ ದೇವಾಲಯ ಅಡ್ಡಿಯಾಗಿದ್ದರಿಂದ ಪಾಕ್ ಸರ್ಕಾರ ಈ ಕ್ರಮ ಕೈಗೊಂಡಿದೆ. ಕೇವಲ ಜೈನ ದೇವಾಲಯ ಮಾತ್ರವೇ ಅಲ್ಲದೇ ಮಹಾರಾಜ ಬಿಲ್ಡಿಂಗ್ ಹಾಗೂ ಕಪುರ್ತಲಾಮ್ ಹೌಸ್ ಗಳನ್ನೂ ಸಹ ಅಲ್ಲಿನ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ ಪಂಜಾಬ್ ಅಸೆಂಬ್ಲಿಯ ವಿಪಕ್ಷ ನಾಯಕ ಮಿಯಾನ್ ಮೆಹ್ಮೂದ್ ಉರ್ ರಶೀದ್ ಜೈನ ದೇವಾಲಯ ಹಾಗೂ ಇನ್ನಿತರ ಕಟ್ಟಡಗಳನ್ನು ನೆಲಸಮಗೊಳಿಸುವುದನ್ನು ಖಂಡಿಸಿ ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ದೇವಾಲಯವನ್ನು ನೆಲಸಮಗೊಳಿಸುವ ಬದಲು ಮೆಟ್ರೋ ರೈಲು ಮಾರ್ಗವನ್ನು ಬದಲಾವಣೆ ಮಾಡಬಹುದಾಗಿತ್ತು. ಇಲ್ಲವೇ ಟನಲ್ ತಂತ್ರಜ್ಞಾನ ಬಳಸಿ ದೇವಾಲಯವನ್ನು ಉಳಿಸಬಹುದಾಗಿತ್ತು ಎಂದು ರಶೀದ್ ಹೆಳಿದ್ದಾರೆ. 1992 ರಲ್ಲಿ ಬಾಬ್ರಿ ಮಸೀದಿ ನೆಲಸಮಗೊಂಡ ಸೇಡಿಗೆ ಲಾಹೋರ್ ನಲ್ಲಿದ್ದ ಈ ಜೈನ ದೇವಾಲಯದ ಮೇಲೆಯೂ ದಾಳಿ ನಡೆಸಲಾಗಿತ್ತು. ಅಂದಿನಿಂದ ಈ ದೇವಾಲಯ ಶಿಥಿಲಾವಸ್ಥೆಯಲ್ಲಿತ್ತು.

SCROLL FOR NEXT