ನವದೆಹಲಿ: ಎಫ್ 16 ಫೈಟರ್ ಜೆಟ್‌ಗಳನ್ನು ಪಾಕಿಸ್ತಾನಕ್ಕೆ ಮಾರಲು ಅಮೆರಿಕ ನಿರ್ಧರಿಸಿದೆ. ಅಮೆರಿಕದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ ಭಾರತ ಇದು ಭಯೋತ್ಪಾದನೆಗೆ ಸಹಾಯ ಮಾಡುತ್ತದೆ ಎಂದು ಹೇಳಿದೆ.
ಪಾಕಿಸ್ತಾನಕ್ಕೆ ಎಫ್ 16 ಜೆಟ್‌ಗಳನ್ನು ಮಾರುವ ನಿರ್ಧಾರದ ಬಗ್ಗೆ ಭಾರತ ಅಮೆರಿಕ ರಾಯಭಾರಿಗೆ ತಮ್ಮ ಅಸಮಧಾನವನ್ನು ತಿಳಿಸಲಿದೆ.
ಈ ಬಗ್ಗೆ ವಿದೇಶಾಂಗ ಸಚಿವಾಲಯವು ಟ್ವೀಟ್ ಮಾಡಿದೆ.
700 ಮಿಲಿಯನ್ ಅಮೆರಿಕನ್ ಮೌಲ್ಯದ ಫೈಟರ್ ಜೆಟ್‌ಗಳನ್ನು ಅಮೆರಿಕ ಪಾಕಿಸ್ತಾನಕ್ಕೆ ಮಾರಲು ಒಬಾಮಾ ಸರ್ಕಾರ ತೀರ್ಮಾನಿಸಿದೆ. ಈ ತೀರ್ಮಾನವನ್ನು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳು ವಿರೋಧಿಸಿದ್ದರೂ ಅಮೆರಿಕ ಪಾಕಿಸ್ತಾನದೊಂದಿಗೆ ಫಾರಿನ್‌ಮಿಲಿಟರಿ ಸೇಲ್ ಒಪ್ಪಂದ ಮಾಡಿಕೊಂಡು ಎಫ್ 16 ಬ್ಲಾಕ್ 52 ವಿಮಾನಗಳನ್ನು ಮಾರಲು ನಿರ್ಧರಿಸಿದೆ.