ಸಿಯೋಲ್: ದಕ್ಷಿಣ ಕೊರಿಯಾದ ಪತ್ತೇದಾರಿ ಏಜೆನ್ಸಿಗಳ ಮೇಲೆ ದಾಳಿ ನಡೆಸಿಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಉತ್ತರ ಕೊರಿಯಾದ ಮುಖಂಡ ಕಿಮ್ ಜಾಂಗ್ ಉನ್ ಆದೇಶ ನೀಡಿದ್ದಾರೆ ಎನ್ನಲಾಗಿದೆ
ಉತ್ತರಕೊರಿಯಾದ ಅಣ್ವಸ್ತ್ರ ಪರೀಕ್ಷೆ ಮತ್ತು ಕ್ಷಿಪಣಿ ಉಡಾವಣೆಯ ಬಳಿಕ ಕೊರಿಯ ಉಪಖಂಡದಲ್ಲಿ ಉದ್ವಿಗ್ನ ವಾತಾವರಣ ಮೂಡಿದ್ದೆ. ದಕ್ಷಿಣ ಕೊರಿಯಾ ಮೇಲೆ ಸೈಬರ್ ಮತ್ತಿತರ ದಾಳಿಗಳನ್ನು ಆಯೋಜಿಸಲು ಸಕ್ರಿಯ ಸಾಮರ್ಥ್ಯ ಗಳಿಸಿಕೊಳ್ಳಬೇಕೆಂಬ ಕಿಮ್ ಆದೇಶವನ್ನು ಅನುಷ್ಠಾನಕ್ಕೆ ತರಲು ಗುಪ್ತಚರ ಸಂಸ್ಥೆ ಕಾರ್ಯಾರಂಭ ಮಾಡಿದೆ ಎಂದು ದ.ಕೊರಿಯಾ ಸಯೆನುರಿ ಪಕ್ಷದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉತ್ತರ ಕೊರಿಯಾ ದಕ್ಷಿಣ ಕೊರಿಯಾ ಮೇಲೆ ಈ ಹಿಂದೆಯೂ ದಾಳಿ ಮಾಡಿದೆ. ಉತ್ತರ ಕೊರಿಯಾದ ಶಾಪಿಂಗ್ ಮಾಲ್, ಬ್ಲೂ ಹೌಸ್, ಸೇರಿದಂತೆ ಹಲವು ಕಡೆ ದಾಳಿ ನಡೆಸಲು ಭಯೋತ್ಪಾದಕರು ಸಿದ್ಧತೆ ನಡೆಸಿದ್ದಾರೆ ಎಂದು ಉತ್ತರ ಕೊರಿಯಾ ಮುಖ್ಯಸ್ಥ ಕಿಮ್ ಜಾಂಗ್ ಆನ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾದ ಮೇಲೆ ದಾಳಿ ನಡೆಸಲು ಉತ್ತರ ಕೊರಿಯಾ ಸರ್ವ ಸನ್ನದ್ಧವಾಗಿದೆ.