ವಿರಾಟ್ ಕೊಹ್ಲಿ ಅಭಿಮಾನಿ 
ವಿದೇಶ

ವಿರಾಟ್ ಕೊಹ್ಲಿಯ ಪಾಕಿಸ್ತಾನಿ ಅಭಿಮಾನಿಗೆ ಜಾಮೀನು ಮಂಜೂರು

ಪಾಕ್ ನೆಲದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಟ್ಟಾ ಅಭಿಮಾನಿ ಉಮರ್ ದ್ರಾಜ್ ಗೆ ಜಾಮೀನು ದೊರೆತಿದೆ.

ಇಸ್ಲಾಮಾಬಾದ್: ಪಾಕ್ ನೆಲದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಟ್ಟಾ ಅಭಿಮಾನಿ ಉಮರ್ ದ್ರಾಜ್ ಗೆ ಜಾಮೀನು ದೊರೆತಿದೆ.
ಪಂಜಾಬ್ ಪ್ರಾಂತ್ಯದ ನ್ಯಾಯಾಲಯ ಉಮರ್ ದ್ರಾಜ್ ಗೆ ಜಾಮೀನು ಮಂಜೂರು ಮಾಡಿರುವ ಬಗ್ಗೆ ಪಾಕ್ ಪತ್ರಿಕೆ ಡಾನ್ ವರಿ ಪ್ರಕಟಿಸಿದೆ. 50 ,000 ರೂ ಮೌಲ್ಯದ ಬಾಂಡ್ ನೀಡಿ ಜಾಮೀನು ಪಡೆದುಕೊಳ್ಳುವಂತೆ ಉಮರ್ ದ್ರಾಜ್ ಗೆ ಕೋರ್ಟ್ ಸೂಚನೆ ನೀಡಿದೆ.
ಫೆ.18 ರಂದು ನಡೆದಿದ್ದ ವಿಚಾರಣೆಯಲ್ಲಿ ಅನೀಕ್ ಅನ್ವರ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು ನಂತರ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಅಸಾದುಲ್ಲಾ ಸಿರಾಜ್ ಉಮರ್ ದ್ರಾಜ್ ನ ಜಾಮೀನು ಅರ್ಜಿ ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಿದ್ದಾರೆ. ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿರುವ ಉಮರ್ ದ್ರಾಜ್ ತನ್ನ ಮನೆಯಲ್ಲಿ ಭಾರತದ ಧ್ವಜ ಹಾರಿಸಿದ್ದಕ್ಕಾಗಿ ಜ.25 ರಂದು ಬಂಧನಕ್ಕೊಳಗಾಗಿದ್ದ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಪೆಟ್ರೋಲ್-ಡೀಸೆಲ್ ದರ ಲೀಟರ್‌ಗೆ ರೂ.3 ಏರಿಕೆ, 4 ವರ್ಷಗಳ ಬಳಿಕ ಇಂಧನ ದರ ಪರಿಷ್ಕರಣೆ..!

ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್: ಪೆಟ್ರೋಲ್-ಡೀಸೆಲ್ ಬಳಿಕ CNG ದರವೂ ಹೆಚ್ಚಳ..!

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಬೀರ್, ವಿಸ್ಕಿ ದರ ಇಳಿಕೆ ಮಾಡಿದ ರಾಜ್ಯ ಸರ್ಕಾರ

ಹಿಜಾಬ್ ನಿಷೇಧ ಹಿಂಪಡೆದ ಸರ್ಕಾರ: ನ್ಯಾಯಾಂಗಕ್ಕೆ ಮಾಡಿದ ಅವಮಾನ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

ಕರೆಯದ ಕಾರ್ಯಕ್ರಮಕ್ಕೆ ಹೆಂಗಪ್ಪ ಬರಲಿ: ಪಿತೂರಿ ಮಾಡುವುದನ್ನು ಬಿಟ್ಟು ಬೆಳೆಯುವವರನ್ನು ಪ್ರೋತ್ಸಾಹಿಸಿ; ಜೆಸಿ ಮಾಧುಸ್ವಾಮಿ

SCROLL FOR NEXT