ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ನವಾಜ್ ಷರೀಷ್ ಅವರು ಅಲ್ ಖೈದಾ ಉಗ್ರ ಸಂಘಟನೆಯ ಮಾಜಿ ಮುಖಂಡ ಒಸಾಮಾ ಬಿನ್ ಲಾಡನ್ ನಿಂದ ಹಣ ಪಡೆದಿದ್ದರು ಎಂಬ ಆಘಾತಕಾರಿ ವಿಷಯ ಪುಸ್ತಕವೊಂದರಿಂದ ಹೊರಬಿದ್ದಿದೆ.
ಐಎಸ್ಐ ಮಾಜಿ ಏಜೆಂಟ್ ಖಲೀದ್ ಖವಾಜ ಅವರ ಪತ್ನಿ ಶಾಮಮ ಖಲೀದ್ ಅವರು ಬರೆದಿರುವ ಶಹೀದ್-ಐ-ಅಮನ್ ಪುಸ್ತಕದಲ್ಲಿ ಈ ವಿಷಯವನ್ನು ಬರೆದಿದ್ದಾರೆ.
ಪಿಎಂಎಲ್ ಪಕ್ಷದ ಮುಖ್ಯಸ್ಥರಾಗಿದ್ದ ನವಾಜ್ ಷರೀಫ್ ಅವರು ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ಮುಖ್ಯಸ್ಥ ಬೆನಜೀರ್ ಭುಟೋ ವಿರುದ್ಧದ ಚುನಾವಣೆಯಲ್ಲಿ ಸೆಣೆಸಲು ಅಲ್ ಖೈದಾ ಸಂಸ್ಥಾಪಕ ಬಿನ್ ಲಾಡನ್ ನಿಂದ ದೇಣಿಗೆ ಪಡೆದಿದ್ದರು ಎಂದು ಬರೆದಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಇಸ್ಲಾಮಿಕ್ ವ್ಯವಸ್ಥೆಯ ಪರಿಚಯಿಸುವ ಷರೀಫ್ ಪ್ರತಿಜ್ಞೆ ಲಾಡೆನ್ ಆಕರ್ಷಿಸಿತು. ಈ ಹಿನ್ನೆಲೆಯಲ್ಲಿ ಲಾಡನ್, ಷರೀಫ್ ಅವರಿಗೆ ದೇಣಿಗೆ ನೀಡಿದ್ದರು. ಆದರೆ ನವಾಜ್ ಷರೀಫ್ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಭರವಸೆಗಳಿಂದ ಸರಿಯಬೇಕಾಗಿ ಬಂತು ಎಂಬುದನ್ನು ಪುಸ್ತಕದಲ್ಲಿ ಪ್ರತಿಪಾದಿಸಲಾಗಿದೆ.