ವಿದೇಶ

ಶಿಯಾ ಧರ್ಮಗುರು ಸೇರಿ 47 ಮಂದಿಗೆ ಗಲ್ಲು

Mainashree
ರಿಯಾದ್: ಸೌದಿ ರಾಜ ಮನೆತನದ ವಿರುದ್ಧ 2011ರಲ್ಲಿ ಪ್ರತಿಭಟನೆ ಆಯೋಜಿಸಿದ್ದ ಶಿಯಾ ಪಂಥದ ಧರ್ಮ ಗುರು ಶೇಖ್ ನಿಮ್ರ್ ಅಲ್ ನಿಮ್ರ್  ಸೇರಿ 47 ಮಂದಿಯನ್ನು ಭಯೋತ್ಪಾದನೆ ಆರೋಪದ ಅಡಿಯಲ್ಲಿ ಸೌದಿ ಅರೇಬಿಯಾ ಸರ್ಕಾರ ಶನಿವಾರ ಗಲ್ಲಿಗೇರಿಸಿದೆ. 
ಶಿಯಾ ಧರ್ಮಗುರು ಶೇಖ್ ನಿಮ್ರ್  ಅವರ ಗಲ್ಲು ಸೌದಿ ಅರೇಬಿಯಾದ ಶಿಯಾ ಪಂಥದ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಭಟನೆಗೆ ಕಿಚ್ಚು ಹೊತ್ತಿಸಿದೆ. ಹೀಗಾಗಿ ಅಲ್ಲಿ, ಶಾಂತಿಗೆ ಭಂಗ ಉಂಟಾಗಿದೆ. ಸೌದಿಯ ಪೂರ್ವ ವಲಯದ ಬಹ್ರೈನ್ ಪ್ರಾಂತ್ಯದಲ್ಲಿ ಹೆಚ್ಚಿನ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗಿದೆ. 
ಸೌದಿ ಸರ್ಕಾರ 47 ಖೈದಿಗಳ ಹೆಸರುಗಳನ್ನು ಪ್ರಕಟಿಸಿದ್ದು, ಅದರಲ್ಲಿ ಧರ್ಮಗುರು ಅಲ್ ನಿಮ್ರ್  ಅವರ ಹೆಸರೂ ಉಲ್ಲೇಖವಾಗಿದೆ. ಗಲ್ಲಿಗೇರಿ ದ 47 ಜನರ ಪೈಕಿ ಓರ್ವ ಚಾಡ್ ಮತ್ತು ಇನ್ನೊಬ್ಬ ಈಜಿಪ್ಟ್‍ನ ಪ್ರಜೆಯಾಗಿದ್ದು, ಇನ್ನುಳಿದವರೆಲ್ಲವರೂ ಸೌದಿ ಅರೇಬಿಯಾದ ಪ್ರಜೆಗಳಾಗಿದ್ದಾರೆ. 
ರಾಜ ಮನೆತನಕ್ಕೆ ಎಚ್ಚರಿಕೆ: ಶಿಯಾ ಧರ್ಮ ಗುರು ನಿಮ್ರ್ ರನ್ನು ಗಲ್ಲಿಗೇರಿಸಿದ್ದರಿಂದ ಸೌದಿ ರಾಜಮನೆತನ ಭಾರಿ ಬೆಲೆ ತೆರಬೇಕಾಗಬಹುದು. ಜತೆಗೆ ಅದರ ಪತನಕ್ಕೂ ಕಾರಣ ವಾಗಬಹುದು ಎಂದು ಇರಾನ್ ಸರ್ಕಾರ ಎಚ್ಚರಿಕೆ ನೀಡಿದೆ.
SCROLL FOR NEXT