ನವದೆಹಲಿ: ಪಠಾಣ್ ಕೋಟ್ ದಾಳಿ ಪ್ರಕರಣವನ್ನು ಪರಿಹರಿಸಲು ಪಾಕಿಸ್ತಾನದ ನೆರವು ಕೋರಲು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ)ನಿರ್ಧರಿಸಿದೆ.
ಸಂಚುಕೋರರು ಸಂಪರ್ಕಿಸಿದ ವ್ಯಕ್ತಿಗಳ ಗುರುತು ಪತ್ತೆಯಾದ ಬಳಿಕ ಪಾಕ್‍ನಿಂದ ಸಹಾಯ ಪಡೆಯಲಾಗುವುದು ಎಂದಿದ್ದಾರೆ ಎನ್‍ಐಎ ಮುಖ್ಯಸ್ಥ ಶರದ್ ಕುಮಾರ್.
ಇದೇ ವೇಳೆ, ಮೃತ ಉಗ್ರರ ಡಿಎನ್‍ಎ ಮಾದರಿ, ಅವರ ಫೋನ್ ಕರೆಗಳ ವಿವರ, ಪಾಕ್‍ನಲ್ಲಿರುವ ಸಂಚುಕೋರರ ಸಂಖ್ಯೆಗಳು ಸೇರಿದಂತೆ ಹಲವು ಮಾಹಿತಿಗಳ ಜೊತೆಗೆ ಲೆಟರ್ಸ್ ರೊಗೇಟರಿಯನ್ನು ಭಾರತವು ಪಾಕಿಸ್ತಾನಕ್ಕೆ ಕಳುಹಿಸುವ ಸಾಧ್ಯತೆಯಿದೆ.