ಬೈರೂತ್: ಸಿರಿಯಾದ ಅಲೆಪ್ಪೊ ಪ್ರಾಂತ್ಯದಲ್ಲಿ ಸೋಮವಾರ ರಷ್ಯಾ ನಡೆಸಿದ ವಾಯು ದಾಳಿಗೆ ಶಿಕ್ಷಕರು ಹಾಗೂ ಎಂಟು ಶಾಲಾ ಮಕ್ಕಳು ಬಲಿಯಾಗಿದ್ದಾರೆ.
ಬಂಡುಕೋರರು ಹಾಗೂ ಸಿರಿಯಾ ಪಡೆಗಳ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಭಾನುವಾರದಿಂದೀಚೆಗೆ ಬೃಹತ್ ಪ್ರಮಾಣದ ವಾಯು ದಾಳಿ ನಡೆಯುತ್ತಿದೆ. ದಾಳಿಯಲ್ಲಿ ಶಿಕ್ಷಕರು ಹಾಗೂ ಅಂಜರಾ ಪ್ರದೇಶದ 20ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ ಎಂದು ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ಮೂಲಗಳು ಮಾಹಿತಿ ನೀಡಿವೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.