ಅಡಾಲ್ಫ್ ಹಿಟ್ಲರ್ ಬದುಕಿದ್ದ ಎಂಬ ಶಂಕೆ ಮೂಡಿಸುತ್ತಿರುವ ಪುಸ್ತಕ (ಚಿತ್ರಕೃಪೆ: ಸುಟ್ ಬೀಟ್) 
ವಿದೇಶ

ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ 95 ವಷ೯ ಬದುಕಿದ್ದ?

ಜಗತ್ತು ಕಂಡ ಅತ್ಯಂತ ಕ್ರೂರ ಸರ್ವಾಧಿಕಾರಿ ಎಂದೇ ಬಿಂಬಿಸಲ್ಪಟ್ಟ ಜರ್ಮನಿಯ ಆಡಾಲ್ಫ್ ಹಿಟ್ಲರ್ 95 ವರ್ಷ ಬದುಕಿದ್ದ ಎಂದು ಹೊಸ ಪುಸ್ತಕವೊಂದು ಪ್ರತಿಪಾದಿಸಿದೆ...

ಲಂಡನ್: ಜಗತ್ತು ಕಂಡ ಅತ್ಯಂತ ಕ್ರೂರ ಸರ್ವಾಧಿಕಾರಿ ಎಂದೇ ಬಿಂಬಿಸಲ್ಪಟ್ಟ ಜರ್ಮನಿಯ ಆಡಾಲ್ಫ್ ಹಿಟ್ಲರ್ 95 ವರ್ಷ ಬದುಕಿದ್ದ ಎಂದು ಹೊಸ ಪುಸ್ತಕವೊಂದು ಪ್ರತಿಪಾದಿಸಿದೆ.

ಸಿಮೋನಿ ರೆನೀ ಗ್ಯುರೆರ್ರಿಯೋ ಡಯಾಸ್ ಎಂಬ ಲೇಖಕರು ಬರೆದಿರುವ "ಹಿಟ್ಲರ್ ಇನ್ ಬ್ರೆಜಿಲ್‍- ಹಿಸ್ ಲ್ಯೆಫ಼್ ಆ್ಯ೦ಡ್ ಹಿಸ್ ಡೆತ್' ಪುಸ್ತಕದಲ್ಲಿ 20ನೇ ಶತಮಾನದಲ್ಲಿ ವಿಶ್ವ ಕಂಡ ಅತ್ಯಂತ ಕ್ರೂರ  ಸರ್ವಾಧಿಕಾರಿ ಜರ್ಮನಿಯ ಅಡಾಲ್ಫ್ ಹಿಟ್ಲರ್ ಸುಮಾರು 95 ವರ್ಷಗಳ ಕಾಲ ಬದುಕ್ಕಿದ್ದ ಎಂದು ಪ್ರತಿಪಾದಿಸಲಾಗಿದೆ. ಇತಿಹಾಸದ ಪ್ರಕಾರ ಮತ್ತು ತನಿಖಾ ವರದಿಗಳ ಪ್ರಕಾರ ಅಡಾಲ್ಫ್  ಹಿಟ್ಲರ್ ತನ್ನನ್ನು ತಾನೇ ಶೂಟ್ ಮಾಡಿಕೊ೦ಡು ಸತ್ತಿದ್ದ ಎಂದು ಹೇಳಲಾಗಿತ್ತು. ಆದರೆ ಎಲ್ಲರೂ ಅ೦ದುಕೊ೦ಡ೦ತೆ, ಹಿಟ್ಲರ್ ಆತ್ಮಹತ್ಯೆ ಮಾಡಿಕೊ೦ಡಿರಲಿಲ್ಲ, ಬ್ರೆಜಿಲ್‍ನ ಸಣ್ಣ ಹಳ್ಳಿಯೊ೦ದರಲ್ಲಿ  95 ವಷ೯ದ ತನಕ ಬದುಕಿದ್ದ ಎ೦ದು ಆತನ ಪ್ರಿಯತಮೆಯೇ ಒಪ್ಪಿಕೊ೦ಡಿದ್ದಳು ಎ೦ದು ಪುಸ್ತಕದಲ್ಲಿ ವರದಿಯಾಗಿದೆ.

ಸೋವಿಯತ್ ಒಕ್ಕೂಟದ ದಾಳಿಗೆ ಹೆದರಿದ ಹಿಟ್ಲರ್, ಅಜೆ೯೦ಟಿನಾ, ಪೆರುಗ್ವೆ ಮೂಲಕ ಬ್ರೆಜಿಲ್‍ನ ಮಾಟೋ ಗ್ರೋಸ್ಸೋ ಹಳ್ಳಿಗೆ ಬ೦ದು ತನ್ನ ಪ್ರಿಯತಮೆ ಜತೆಗೆ ನೆಲೆಸಿದ್ದ ಎ೦ದು ಸಿಮೋನಿ  ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ ಎ೦ದು ಮಾಧ್ಯಮವೊಂದು ವರದಿ ಮಾಡಿದೆ. "ಸೋವಿಯತ್ ಒಕ್ಕೂಟದ ಸೈನಿಕರು ಹಿಟ್ಲರ್ ನ ರಹಸ್ಯ ಬಂಕರ್ ಅನ್ನು ಆಕ್ರಮಿಸಿಕೊಳ್ಳುತ್ತಿದ್ದಂತೆಯೇ ಹಿಟ್ಲರ್  ರಹಸ್ಯ ದಾರಿಯಿಂದ ತಪ್ಪಿಸಿಕೊಂಡಿದ್ದ. ಬಳಿಕ ಬ್ರೆಜಿಲ್ ಗೆ ಆಗಮಿಸಿದ ಹಿಟ್ಲರ್ ಮಾಟೋ ಗ್ರೋಸ್ಸೋ ಹಳ್ಳಿಗೆ ತೆರಳಿದ್ದಾನೆ. ಅಲ್ಲಿ ಆತನಿಗೆ ಕಟಿಂಗಾ ಎಂಬ ಮಹಿಳೆಯ ಪರಿಚಯವಾಗಿದ್ದು,  ಆಕೆಯನ್ನು ವಿವಾಹವಾಗಿ ಅಲ್ಲಿಯೇ ತನ್ನ ಹೆಸರನ್ನು ಅಡಾಲ್ಫ್ ಲೀಪ್ಜಿಂಗ್ ಎಂದು ಬದಲಿಸಿಕೊಂಡು ನೆಲೆಸಿದ್ದ ಎಂದು ಪುಸ್ತಕ ವರದಿ ಮಾಡಿದೆ.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೀಡಾಗುತ್ತಿದ್ದು, ಪುಸ್ತಕದಲ್ಲಿರುವ ವರದಿಯ ಸತ್ಯಾಸತ್ಯತೆ ತಿಳಿಯಲು ಮಾಟೋ ಗ್ರೋಸ್ಸೋ ಹಳ್ಳಿಯಲ್ಲಿರುವ ಅಡಾಲ್ಫ್ ಲೀಪ್ಜಿಂಗ್  ಹೆಸರಿನ ಸಮಾದಿಯಿಂದ ಶವವನ್ನು ಹೊರತೆಗೆದು ಡಿಎನ್ ಎ ಪರೀಕ್ಷೆಗೊಳಪಡಿಸಬೇಕು ಎಂದು ಕೆಲ ಸಂಘಟನೆಗಳು ಆಗ್ರಹಿಸಿವೆ.

ಹಿಟ್ಲರ್ ಸತ್ತಿದ್ದು ಹೇಗೆ?
ಸೋವಿಯತ್ ಒಕ್ಕೂಟಕ್ಕೆ ಶರಣಾಗಬಾರದೆ೦ಬ ಉದ್ದೇಶದಿ೦ದ 56 ವಷ೯ದ ಹಿಟ್ಲರ್, 1945ರ ಏಪ್ರಿಲ್ 30ರ೦ದು ತನ್ನನ್ನು ತಾನೇ ಶೂಟ್ ಮಾಡಿಕೊ೦ಡು ಸತ್ತ ಎ೦ದೇ ನ೦ಬಲಾಗಿದೆ.  ಸಾಯಲು, ಸಯನೈಡ್ ಗುಳಿಗೆಯನ್ನು ಕಚ್ಚಿದ್ದ ಎ೦ದೂ ವರದಿಗಳು ಹೇಳಿವೆ. ಆದರೆ, ಹಿಟ್ಲರ್ ದೇಹದ ಅವಶೇಷಗಳು ಏನಾದವು ಎ೦ಬ ಪ್ರಶ್ನೆಗಳಿಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT