ವಿದೇಶ

ಮಗಳಿಗೆ 30 ವರ್ಷ ಸೆರೆವಾಸ, ಅನುಯಾಯಿಗಳ ಮೇಲೆ ಅತ್ಯಾಚಾರ: ಮಾವೋವಾದಿ ನಾಯಕನಿಗೆ 23 ವರ್ಷ ಜೈಲು ಶಿಕ್ಷೆ

Srinivas Rao BV

ಲಂಡನ್: ಭಾರತೀಯ ಮೂಲದ ಮಾವೋವಾದಿ ನಾಯಕ ಅರವಿಂದನ್ ಬಾಲಕೃಷ್ಣನ್ (75) ಗೆ ಯುಕೆ ನ್ಯಾಯಾಲಯ 23 ವರ್ಷಗಳ ಜೈಲು ಶಿಕ್ಷೆ ನೀಡಿದೆ.
ಮೂರು ದಶಕಗಳ ಕಾಲ ಮಗಳನ್ನೇ ಸೇರೆವಾಸದಲ್ಲಿರಿಸಿ, ಅನುಯಾಯಿಗಳ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅರವಿಂದನ್ ಬಾಲಕೃಷ್ಣನ್ ಗೆ ಲಂಡನ್ ನ ಸೌತ್ವಾರ್ಕ್ ಕ್ರೌನ್ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.
30 ವರ್ಷಕ್ಕೂ ಹೆಚ್ಚು ಕಾಲ ಮಗಳನ್ನೇ ಸೆರೆವಾಸಕ್ಕೆ ತಳ್ಳಿದ್ದ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಅರವಿಂದನ್ ಬಾಲಕೃಷ್ಣನ್ ವಿರುದ್ಧ 2015 ಡಿಸೆಂಬರ್ ನಲ್ಲಿ ತನಿಖೆ ನಡೆದು ಅಪರಾಧ ಸಾಬೀತಾಗಿತ್ತು. ತಂದೆಯಿಂದ ಸೆರೆವಾಸಕ್ಕೆ ತಳ್ಳಲ್ಪಟ್ಟ 33 ವರ್ಷದ ಯುವತಿ ಹೇಳಿಕೆ ನೀಡಿದ್ದು, ಸೆರೆಯಲ್ಲಿ ಕಳೆದ 30 ವರ್ಷಗಳು ಭಯಾನಕ, ಅಮಾನವೀಯ ಮತ್ತು ಅವಮಾನಕರವಾಗಿತ್ತು ಎಂದು ಹೇಳಿದ್ದಾಳೆ.
ಸ್ಟ್ಯಾಲಿನ್, ಮಾವೋ, ಪೋಲ್ ಪಾಟ್ ಹಾಗೂ ಸದ್ದಾಮ್ ಹುಸೇನ್ ನಂತಹ ವ್ಯಕ್ತಿಗಳನ್ನೇ ನನ್ನ ತಂದೆ ಮಾದರಿಯಾಗಿರಿಸಿಕೊಂಡಿದ್ದರು, ಮನೆಯಲ್ಲಿ ಅವರನ್ನು ಟೀಕಿಸುವಂತಿರಲಿಲ್ಲ, ಅಷ್ಟರ ಮಟ್ಟಿಗೆ ಅರವಿಂದನ್ ಬಾಲಕೃಷ್ಣನ್ ಸ್ಟ್ಯಾಲಿನ್, ಮಾವೋ, ಸದ್ದಾಮ್ ಹುಸೇನ್ ನನ್ನು ಮೇಲ್ಪಂಕ್ತಿಯಾಗಿರಿಸಿಕೊಂಡು ಅನುಸರಿಸುತ್ತಿದ್ದರು. ಮೂರು ವರ್ಷದವಳಿದ್ದಾಗಲೇ ನನಗೆ ನರ್ಸರಿ ರೈಮ್ಸ್ ಹೇಳದಂತೆ, ಶಾಲೆಯಲ್ಲಿ ಯಾರೊಂದಿಗೂ ಸ್ನೇಹ ಬೆಳೇಸದಂತೆ ನಿರ್ಬಂಧ ವಿಧಿಸಲಾಗಿತ್ತು ಎಂದು ಅರವಿಂದನ್ ಬಾಲಕೃಷ್ಣನ್ ಪುತ್ರಿ ಕೇಟಿ ಮಾರ್ಗನ್-ಡೇವೀಸ್ ಹೇಳಿದ್ದಾಳೆ.

SCROLL FOR NEXT