ಡಮಾಸ್ಕಸ್: ಸಿರಿಯಾ ರಾಜಧಾನಿ ಡಮಾಸ್ಕಸ್ ನಲ್ಲಿ ಐಎಸ್ ಉಗ್ರ ಸಂಘಟನೆ ನಡೆಸಿದ ಬಾಂಬ್ ದಾಳಿಯಲ್ಲಿ 45 ಮಂದಿ ಅಸುನೀಗಿ, 110 ಮಂದಿ ಗಾಯಗೊಂಡಿದ್ದಾರೆ.
ಶಿಯಾ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿದೆ. ಇಬ್ಬರು ಆತ್ಮಹತ್ಯಾ ಬಾಂಬರ್ ಗಳು ಈ ಕೃತ್ಯ ಎಸಗಿದ್ದಾರೆ.
ಡಮಾಸ್ಕಸ್ ನ ದಕ್ಷಿಣ ಭಾಗದ ಗ್ಯಾರೇಜ್ ಒಂದರ ಸಮೀಪ ಈ ದಾಳಿ ನಡೆಸಲಾಗಿದೆ ಎಂದು ಸಿರಿಯಾ ಸರ್ಕಾರದ ಸುದ್ದಿ ಸಂಸ್ಥೆ ತಿಳಿಸಿದೆ.
ಇದಾದದ ಕೆಲವೇ ಹೊತ್ತಿನಲ್ಲಿ ಐಎಸ್ ಸಂಘಟನೆ ತಾನೇ ಈ ಕೃತ್ಯ ಎಸಗಿದ್ದಾಗಿ ಜಾಲತಾಣಗಳಲ್ಲಿ ಘೋಷಿಸಿಕೊಂಡಿದೆ. ಯುದ್ಧಗ್ರಸ್ತ ರಾಷ್ಟ್ರದಲ್ಲಿ ವಿಶ್ವಸಂಸ್ಥೆ ಮಧ್ಯಸ್ತಿಕೆಯಲ್ಲಿ ಶಾಂತಿ ಮಾತುಕತೆ ಆರಂಭವಾಗುವ ಮುನ್ನವೇ ಈ ದಾಳಿ ನಡೆದಿದೆ.