ವಿದೇಶ

ಭಾರತೀಯ ಐಟಿ ಸಂಸ್ಥೆಗಳ ಮೇಲೆ ನಿರ್ಬಂಧಕ್ಕೆ ಅಮೆರಿಕ ಸಿದ್ಧತೆ

Vishwanath S

ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯ ಐಟಿ ಉದ್ಯೋಗಿಗಳು ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಎಚ್-1ಬಿ ವೀಸಾ ಕುರಿತು ಆ ದೇಶದ ಸಂಸದರು ತಗಾದೆ ತೆಗೆದಿದ್ದಾರೆ.

ಐಟಿ ಕಂಪನಿಗಳು ಎಚ್-1ಬಿ ಮತ್ತು ಎಲ್1 ವೀಸಾ ಹೊಂದಿರುವ ನೌಕರರನ್ನು ನೇಮಿಸಿಕೊಳ್ಳುವುದರ ಮೇಲೆ ನಿರ್ಬಂಧ ವಿಧಿಸುವುದಕ್ಕೆ ಸಂಬಂಧಿಸಿದ ವಿದೇಯಕವನ್ನು ಅಮೆರಿಕದ ಸಂಸತ್ತಿನಲ್ಲಿ ಡೆಮಾಕ್ರಟಿಕ್ ಪಕ್ಷದ ನ್ಯೂಜೆರ್ಸಿಯ ಸಂಸದ ಬಿಲ್ ಪಾಸ್ಕೆಲ್ ಮತ್ತು ರಿಪಬ್ಲಿಕನ್ ಪಕ್ಷದ ಕ್ಯಾಲಿಫೋರ್ನಿಯಾದ ಸಂಸದ ಡಾನಾ ರೋಹ್ರಬಚೆರ್ ಮಂಡಿಸಲಾಗಿದೆ.

ಈ ವಿಧೇಯಕ ಅನುಮೋದನೆಗೊಂಡರೆ ಭಾರತೀಯ ಐಟಿ ಕಂಪನಿಗಳು ಎಚ್1ಬಿ ಮತ್ತು ಎಲ್1 ವೀಸಾ ಹೊಂದಿರುವವರನ್ನು ನೌಕರರನ್ನಾಗಿ ನೇಮಿಸಿಕೊಳ್ಳುವುದಕ್ಕೆ ತಡೆಯುಂಟಾಗಲಿದೆ. ಅಮೆರಿಕ ಸಾಕಷ್ಟು ಕುಶಲ, ಅತ್ಯಾಧುನಿಕ ತಾಂತ್ರಿಕ ಜ್ಞಾನ, ಪದವಿ ಹೊಂದಿದ ವೃತ್ತಿಪರರನ್ನು ಸೃಷ್ಟಿಸುತ್ತಿದ್ದರೂ ಅವರಿಗೆ ಕೆಲಸವೇ ಸಿಗುತ್ತಿಲ್ಲ ಎಂಬುದು ಮಸೂದೆ ಮಂಡಿಸಿರುವ ಸಂಸದರ ಕಳವಳವಾಗಿದೆ.

SCROLL FOR NEXT