ಮುಲ್ತಾನ್: ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಟ್ವಿಟ್ಟರ್ ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಪಾಕಿಸ್ತಾನ ಮಾಡೆಲ್ ಕಂದೀಲ್ ಬಲೋಚ್ ರನ್ನು ಆಕೆಯ ಸಹೋದರನೇ ಹತ್ಯೆ ಮಾಡಿದ್ದಾನೆ.
ಕಂದೀಲ್ ಬಲೋಚ್ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ತನ್ನ ಸೆಕ್ಸಿ ಹಾಗೂೆ ಬೋಲ್ಡ್ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದಳು. ಇದಕ್ಕೆ ಆಕೆಯ ಸಹೋದರ ತೀವ್ರ ವಿರೋಧಿಸುತ್ತಿದ್ದ. ಹೀಗಾಗಿ ಇದೊಂದು ಮರ್ಯಾದಾ ಹತ್ಯೆ ಎಂದು ಪಾಕಿಸ್ತಾನ ಪೊಲೀಸರು ತಿಳಿಸಿರುವುದಾಗಿ ಅಲ್ಲಿನ ಡಾನ್ ಪತ್ರಿಕೆ ವರದಿ ಮಾಡಿದೆ.
ಬಲೋಚ್ ವಿಡಿಯೋಗಳ ಬಗ್ಗೆ ಅಪಸ್ವರ ಎತ್ತಿದ್ದ ಆಕೆಯ ಸಹೋದರ ಮೂರು ದಿನಗಳ ಹಿಂದೆ ಆಕೆಗೆ ಬೆದರಿಕೆ ಹಾಕಿದ್ದ ಎಂದು ಪೊಲೀಸ್ ಅಧಿಕಾರಿ ಅಜಮ್ ಸುಲ್ತಾನ್ ತಿಳಿಸಿದ್ದಾರೆ.
ತನ್ನ ತವರೂರದ ಮುಲ್ತಾನ್ ನಲ್ಲಿ ಈದ್ ಆಚರಣೆ ಸಂದರ್ಭದಲ್ಲಿ ಆಕೆಯನ್ನು ಕೊಲ್ಲಲಾಗಿದೆ.
ಅಂತರ್ಜಾಲದಲ್ಲಿ ತನ್ನ ವಿಡಿಯೋ ಹಾಗೂ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತ ಪಡಿಸಿದ್ದ ತನ್ನ ಸಹೋದರ ತನಗೆ ಕೊಲ್ಲುವ ಬೆದರಿಕೆ ಹಾಕಿದ್ದಾನೆ. ಹೀಗಾಗಿ ತನಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೋರಿ ಪಾಕಿಸ್ತಾನ ಆಂತರಿಕ ವ್ಯವಹಾರಗಳ ಸಚಿವ ಹಾಗೂ ಎಸ್ ಪಿ ಅವರಿಗೆ ಮೂರು ವಾರಗಳ ಹಿಂದೆ ಕಂದೀಲ್ ಬಲೋಚ್ ಪತ್ರ ಬರೆದಿದ್ದರು.
ತನ್ನ ಜೀವಕ್ಕೆ ಅಪಾಯವಿದ್ದು, ಮೊಬೈಲ್ ಗೆ ದೂರವಾಣಿಕರೆ ಮಾಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದರು.
ಕಳೆದ ವಾರ ಬಿಡುಗಡೆಯಾದ ಆಕೆಯ 'ಬ್ಯಾನ್' ಮ್ಯೂಸಿಕ್ ವಿಡಿಯೋ ವೈರಲ್ ಆಗಿದ್ದು, ವಿವಾದದ ಕಿಡಿ ಹೊತ್ತಿಸಿತ್ತು, ಈ ಸಂಬಂಧ ದೇಶಾದ್ಯಂತ ವ್ಯಾಪಕ ಚರ್ಚೆ ನಡೆದಿತ್ತು.
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಟ್ಟಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲೂ ಕಂದೀಲ್ ಬಲೋಚ್ ಭಾಗವಹಿಸಿದ್ದರು.