ಕರಾಚಿ: ಸಹೋದರನಿಂದಲೇ ಹತ್ಯೆಯಾದ ಪಾಕಿಸ್ತಾನದ ರೂಪದರ್ಶಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಟಿ ಕಂದೀಲ್ ಬಲೋಚ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತನ್ನ ಬದುಕಿನ ಇನ್ನೊಂದು ಮುಖವನ್ನು ಅನಾವರಣಗೊಳಿಸಿದ್ದಾಳೆ.
2008 ರಲ್ಲಿ ಆಶಿಖ್ ಹುಸೇನ್ ಎಂಬಾತನನ್ನು ವಿವಾಹವಾದೆ. ಆತನಿಂದ ಒಂದು ಗಂಡು ಮಗುವನ್ನು ಕೂಡ ಪಡೆದೆ. ನಾನು ಮನೆ ಬಿಟ್ಟು ಓಡಿ ಬಂದಿಲ್ಲ, ನಾನು ಅಲ್ಲಿ ಇದ್ದಷ್ಟು ಸಮಯ ಪ್ರತಿದಿನ ಸಮಸ್ಯೆಗಳನ್ನೇ ಅನುಭವಿಸಿದ್ದೆ. ಈ ವಿಷಯವನ್ನು ಎಲ್ಲರಿಗೂ ಹೇಳಿದ್ದೆ, ಆದರೆ ಮಾಧ್ಯಮ ಸೇರಿದಂತೆ ಯಾರೋಬ್ಬರು ನನ್ನ ಬೆಂಬಲಕ್ಕೆ ಬರಲಿಲ್ಲ. ನಾನು ಇಮ್ರಾನ್ ಖಾನ್ ರನ್ನು ವಿವಾಹವಾಗಲು ಬಯಸಿದ್ದೆ ಎಂದು ಆರೋಪಿಸಿದ್ದಾರೆ. ಆದರೆ ನನಗೆ ಆ ವೇಳೆಗಾಗಲೇ ಮದುವೆಯಾಗಿತ್ತು. ನನ್ನ ವಯಕ್ತಿಕ ಐಡೆಂಟಿಟಿ ಬಗ್ಗೆ ನನಗೆ ಪ್ರಶ್ನೆ ಮೂಡಿತ್ತು. ನಾನು ಸಾಮಾಜಿಕ ಮಾಧ್ಯಮಗಳ ಸೆನ್ಸೆಷನ್, ಫ್ಯಾಶನ್ ನ ರಾಯಭಾರಿ ನಾನು. ನಾನು ಹೆಣ್ಣು ಮಕ್ಕಳ ಶಕ್ತಿ ಎಂದು ಬಹಳ ಹೆಣ್ಣು ಮಕ್ಕಳು ಹೇಳಿದ್ದಾರೆ. ನಾನು ಅದು ಹೌದು ಕೂಡ.
ನಾನು 17 ವರ್ಷದವಳಾಗಿದ್ದೆ. ಒಬ್ಬ ಅವಿದ್ಯಾವಂತನಿಗೆ ಕೊಟ್ಟು ನನ್ನ ಪೋಷಕರು ನನಗೆ ಬಲವಂತವಾಗಿ ಮದುವೆ ಮಾಡಿದ್ದರು. ಅಂನತರ ನಾನು ನಿಂದನೆಗೊಳಗಾದೆ, ಬಲೋಚ್ ಕುಂಟುಂಬಗಳಲ್ಲಿ, ಹಳ್ಳಿಗಳಲ್ಲಿ ಇಂಥದ್ದು ಸಾಮಾನ್ಯವಾಗಿ ಬಿಟ್ಟಿದೆ. ನನ್ನ ಜೀವನವನ್ನು ಪೂರ್ತಿಯಾಗಿ ಆ ಜಾಗದಲ್ಲಿ ಕಳೆಯಲು ನನಗೆ ಇಷ್ಟ ವಿರಲಿಲ್ಲ. ನಾನು ಇದಕ್ಕಾಗಿ ಹೇಳಿ ಮಾಡಿಸಿದವಳಲ್ಲ, ನನಗೆ ಈ ರೀತಿ ಬದುಕುಪವುದು ಇಷ್ಟವಿಲ್ಲ, ಬಾಲ್ಯದಿಂದಲೂ ನನಗೆ ಏನಾದರೊಂದು ಸಾಧನೆ ಮಾಡಬೇಕು ಎಂಬುದು ಮನಸ್ಸಿನಲ್ಲಿತ್ತು. ನನ್ನ ಕಾಲೆ ಮೇಲೆ ಸ್ವತಂತ್ರ್ಯವಾಗಿ ನಿಲ್ಲಬೇಕೆಂಬ ಬಯಕೆಯಿತ್ತು ಎಂದು ಕಂದೀಲ್ ಸಂದರ್ಶನದಲ್ಲಿ ತಿಳಿಸಿದ್ದಾಳೆ.
ಬಲವಂತವಾಗಿ ಮಾಡಿದ ವಿವಾಹ ಏನಾಗುತ್ತದೆ ಎಂದು ಗೊತ್ತಿದೆಯಾ? ಅವಿದ್ಯಾವಂತ ಪ್ರಾಣಿಯಂತ ಮನುಷ್ಯನ ಜೊತೆ ನನ್ನ ಮದುವೆ. ನನಗೆ ಈಗಾಗಲೇ ವಿವಾಹವಾಗಿದೆ ಎಂದು ನಾನು ಯಾಕೆ ಹೇಳಿಕೊಳ್ಳಬೇಕು ಎಂದು ಬಲೋಚ್ ಹೇಳಿದ್ದಳು.
ನನ್ನ ಪೋಷಕರು, ಹಾಗೂ ನನ್ನ ಕುಟುಂಬದ ಯಾರೋಬ್ಬರು ನನಗೆ ಬೆಂಬಲ ನೀಡಲಿಲ್ಲ. ನನ್ನ ಮಗನನ್ನು ಭೇಟಿ ಮಾಡಲು ನನ್ನ ಗಂಡ ಅವಕಾಶ ಕೊಡಲಿಲ್ಲ. ನನಗೆ ನಂಬಿಕೆಯಿದೆ. ನನ್ನ ಮಗ ಬೆಳೆದು ದೊಡ್ಡವನಾದ ಮೇಲೆ ಆತ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಾನೆ. ನಾನು ಮಾಡಿದ್ದು ಸರಿ ಎಂಬ ಭಾವನೆ ಮೂಡುತ್ತದೆ ಎಂದು ಕಂದೀಲ್ ತಿಳಿಸಿದ್ದಾಳೆ.
ನಾನು ಪ್ರತಿಯೊಬ್ಬರ ಜೊತೆ ಹೋರಾಟ ಮಾಡಿದೆ. ನಾನು ಮಾನಸಿಕವಾಗಿ ಎಷ್ಟು ಗಟ್ಟಿಗಿತ್ತಿ ಎಂಬುದು ನನಗೆ ಮಾತ್ರ ಗೊತ್ತು. ನಾನು ಶೋಬಿಜ್ ನಲ್ಲಿ ಕೆಲಸ ಮಾಡಲು ಆರಂಭಿಸಿದಾಗ ಎಷ್ಟು ಕಷ್ಟ ಅನುಭವಿಸಿದೆ ಎಂಬುದು ನನಗೆ ಗೊತ್ತು. ಹೆಣ್ಣು ಮಕ್ಕಳು ಅದರಲ್ಲೂ ಹೊಸದಾಗಿ ಇಲ್ಲಿಗೆ ಬರುವ ಹೆಣ್ಣು ಮಕ್ಕಳು ಎಂತೆಂಥ ಕಠಿಣ ಪರಿಸ್ಥಿತಿ ಎದುರಿಸಬೇಕು, ಹೆಣ್ಣು ಮಕ್ಕಳನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದು ನಿಮಗೆ ತಿಳಿದಿದೆಯಾ ಎಂದು ಕಂದೀಲ್ ಪ್ರಶ್ನಿಸಿದ್ದಾಳೆ.
ನೀವು ಇದನ್ನು ನನ್ನ ಸೇಡು ಎಂದು ಹೇಳಬಹುದು ಆದರೆ, ಈ ಸಮಾಜದಲ್ಲಿ ಯಾವುದು ಒಳ್ಳೆಯದಿಲ್ಲ, ಪಿತೃಪ್ರಧಾನವಾದ ಸಮಾಜ ತುಂಬಾ ಕೆಟ್ಟದ್ದು, ಇದರ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ನೀವು ಈ ರೀತಿಯ ಪರಿಸ್ಥಿತಿ ಎದುರಿಸುವ ಬಗ್ಗೆ ಚಿಂತಿಸಿ ಎಂದು ಕಂದೀಲ್ ಸಂದರ್ಶನದ ವೇಳೆ ತಿಳಿಸಿದ್ದಾಳೆ.
ಇತ್ತೀಚೆಗೆ ಬಿಡುಗಡೆಯಾದ ತನ್ನ ಮ್ಯೂಸಿಕ್ ಆಲ್ಬಂ ಬ್ಯಾನ್ ಬಗ್ಗೆ ಪ್ರಸ್ತಾಪಿಸಿದ ಕಂದೀಲ್, ನಾನು ಪಾಕಿಸ್ತಾನದಲ್ಲಿ ಹೊಸ ಟ್ರೆಂಡ್ ರೂಪಿಸಲು ಪ್ರಯತ್ನಿಸುತ್ತಿದ್ದೇನೆ. ನಾನು ನಿಕಿ ಮಿನಾಜ್ ಮತ್ತು ಮಿಯಾ ಖಾಲಿಫಾ ಅವರನ್ನು ಕಾಪಿ ಮಾಡುತ್ತಿದ್ದೇನೆ ಎಂದು ಕೆಲವರು ಯೋಚಿಸಬಹುದು. ಅವರು ಅವರ ವಿಡಿಯೋಗಳನ್ನು ಎಂಜಾಯ್ ಮಾಡಬಹುದಾದರೇ ಕಂದೀಲ್ ಬಲೋಚ್ ಯಾಕೆ ಮಾಡಬಾರದು. ನನ್ನೆ ಕೆಲಸ ಮನರಂಜನೆ, ಜನರಿಗೆ ಮನರಂಜನೆ ನೀಡುವುದಷ್ಟೆ ನನ್ನ ಉದ್ದೇಶ ಎಂದು ತಿಳಿಸಿದ್ದಾಳೆ.
ವಿಡಿಯೋ ವನ್ನು ಸದ್ಯ ಬಿಡುಗಡೆ ಮಾಡುವುದು ಬೇಡ. ಕೆಲ ಶೂಟಿಂಗ್ ಗಳಲ್ಲಿ ಸಮಸ್ಯೆ ಇದೆ ಎಂದು ಹೇಳಿದ್ದೆ. ಆದರೆ ಆ ದೃಷ್ಯಗಳನ್ನು ಅವರು ತೆಗೆದು ಹಾಕಿರಲಿಲ್ಲ. ಈ ದೃಶ್ಯಗಳಿಂದ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಎಂದು ಅವರು ಹೇಳಿದ್ದರು.
ಸಮಾಜದ ಕಟ್ಟು ಪಾಡುಗಳ ವಿರುದ್ಧ ಒಬ್ಬ ಮಹಿಳೆಯಾಗಿ ಇಡೀ ಜೀವನ ಹೋರಾಟ ಮಾಡಬೇಕಿದೆ. ನಾನು ಮಹಿಳಾ ಸಬಲೀಕರಣದ ಬಗ್ಗೆ ದನಿ ಎತ್ತಿದರೇ ಮಾಧ್ಯಮ ನನಗೆ ಬೆಂಬಲ ನೀಡುವುದಿಲ್ಲ. ಅಥವಾ ಯಾವುದೇ ಕ್ರೆಡಿಟ್ ಕೂಡ ಕೊಡುವುದಿಲ್ಲ. ಮಾಧ್ಯಮಗಳು ಹೋರಾಟ ನಡೆಸುತ್ತಿರುವ ಹೆಣ್ಣು ಮಕ್ಕಳನ್ನು ಗಮನಿಸುವುದಿಲ್ಲ ಎಂದು ಕಂದೀಲ್ ಹೇಳಿದ್ದಾಳೆ.
ಡಾನ್ ಪತ್ರಿಕೆಗೆ ಸಂದರ್ಶನ ನೀಡಿದ ಕೆಲವೇ ದಿನಗಳಲ್ಲಿ ಪಾಕಿಸ್ತಾನ ಮಾಡೆಲ್ ಕಂದೀಲ್ ಬಲೋಚ್ ಳನ್ನು ಆತನ ಸಹೋದರನೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಇದೊಂದು ಮರ್ಯಾದಾ ಹತ್ಯೆ ಎನ್ನಲಾಗಿದೆ.