ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಮುಂದಿನ ಮುಖ್ಯಸ್ಥರನ್ನು ಆಯ್ಕೆ ಮಾಡುವುದಕ್ಕೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಗೌಪ್ಯ ಮತದಾನ ನಡೆಸಿದೆ.
ಗೌಪ್ಯಮತದಾನದ ಫಲಿತಾಂಶ ಹೊರಬಂದಿದೆಯಾದರೂ, ವಿಶ್ವಸಂಸ್ಥೆ ಫಲಿತಾಂಶದ ಬಗ್ಗೆ ಬಹಿರಂಗವಾಗಿ ಘೋಷಣೆ ಮಾಡಿಲ್ಲ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷರಾಗಿರುಜ್ವ ಜಪಾನ್ ನ ರಾಯಭಾರಿ ಕೊರೋ ಬೆಸ್ಶೋ, ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಹೊಂದಿರುವ ರಾಷ್ಟ್ರಗಳ ಪ್ರತಿನಿಧಿಗಳ ಮೂಲಕ ಅಭ್ಯರ್ಥಿಗಳಿಗೆ ಫಲಿತಾಂಶ ತಿಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ವಿಶ್ವ ಸಂಸ್ಥೆ ನಿಯಮಗಳ ಪ್ರಕಾರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯನ್ನು ಭದ್ರತಾ ಮಂಡಳಿಯ ಸಾಮಾನ್ಯ ಸಭೆಯ ಶಿಫಾರಸನ್ನು ಆಧರಿಸಿ ನೇಮಕ ಮಾಡಲಾಗುತ್ತದೆ. ಭದ್ರತಾ ಮಂಡಳಿಯ ಐದು ಶಾಶ್ವತ ಸದಸ್ಯ ರಾಷ್ಟ್ರಗಳು ಅಂತಿಮವಾಗಿ ವಿಶ್ವಸಂಸ್ಥೆಯ ಮುಖ್ಯಸ್ಥ ಹುದ್ದೆಗೆ ನೇಮಕವಾಗಬೇಕಿರುವ ಅಭ್ಯರ್ಥಿಯನ್ನು ಸಾಮಾನ್ಯ ಸಭೆಯ ಅಂಗೀಕಾರಕ್ಕೆ ಕಳಿಸಲಿವೆ. ಅಂತಿಮ ಅಭ್ಯರ್ಥಿ ಆಯ್ಕೆಯಾಗುವುದಕ್ಕೂ ಮುನ್ನ ಹಲವು ಸುತ್ತುಗಳಲ್ಲಿ ಗೌಪ್ಯಮತದಾನ ನಡೆಯಲಿದೆ.