ವಿದೇಶ

ಇಸ್ಲಾಮಾಬಾದ್ ನಲ್ಲಿ ವ್ಯಾಪಕ ಮಳೆ: 30 ಸಾವು, 69 ಮಂದಿಗೆ ಗಾಯ

Sumana Upadhyaya

ಇಸ್ಲಾಮಾಬಾದ್: ಪಾಕಿಸ್ತಾನದ ಉತ್ತರ ಭಾಗದಲ್ಲಿ ಉಂಟಾದ ವ್ಯಾಪಕ ಮಳೆಯಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 30 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಇಸ್ಲಾಮಾಬಾದ್ ನಗರದಲ್ಲಿ ಸುರಿದ ಅವ್ಯಾಹತ ಮಳೆಗೆ 11 ಮಂದಿ ಸಾವನ್ನಪ್ಪಿ 69 ಮಂದಿ ಗಾಯಗೊಂಡಿದ್ದಾರೆ. ರಾವಲ್ಪಿಂಡಿ ಅವಳಿ ನಗರದಲ್ಲಿ 19 ಮಂದಿ ಸಾವನ್ನಪ್ಪಿ, 122 ಮಂದಿ ಗಾಯಗೊಂಡಿದ್ದಾರೆ.

ರಾಜಧಾನಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಮಳೆಯಿಂದಾಗಿ ಕಡಿತಗೊಂಡಿದೆ. ತೀವ್ರ ಮಳೆ ಮತ್ತು ಗುಡುಗಿನಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾಗಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಬೆನಜೀರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ರದ್ದುಪಡಿಸಲಾಗಿದೆ. ಮೆಟ್ರೋ ಬಸ್ಸುಗಳು ಕೂಡ ಸ್ಥಗಿತಗೊಂಡಿವೆ. ಅನೇಕ ರಸ್ತೆಗಳು ಸಂಪರ್ಕ ಕಡಿತಗೊಂಡಿವೆ.
ಪೊಲೀಸ್ ಸಿಬ್ಬಂದಿಗಳನ್ನು ಜಾಗೃತರಾಗಿರುವಂತೆ ಸೂಚಿಸಲಾಗಿದೆ.

SCROLL FOR NEXT