ದೋಹಾ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಕತಾರ್ ರಾಜಕುಮಾರ ಎಮಿರ್ ತಮಿಮ್ ಬಿನ್ ಹಮದ್ ಅಲ್ ತಾನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದಲ್ಲಿ ಹೂಡಿಕೆ ಮಾಡುವ ಸಂಬಂಧ ಮಾತುಕತೆ ನಡೆಸಲಾಯಿತು. ದೋಹಾ ಸಭೆಯಲ್ಲಿ ಮೋದಿ, ಕೃಷಿ ಸಂಸ್ಕರಣೆ, ರೈಲ್ವೆಗಳು ಮತ್ತು ಸೋಲಾರ್ ಶಕ್ತಿ ಕ್ಷೇತ್ರಗಳಲ್ಲಿ ಕತಾರ್ ಜೊತೆ ಭಾರತ ಒಪ್ಪಂದ ಮಾಡಿಕೊಂಡಿದೆ.
ಇಂದು ಬೆಳಗ್ಗೆ ವ್ಯಾಪರೋದ್ಯಮಿಗಳ ಸಭೆಯಲ್ಲಿ ಪಾಲ್ಗೊಂಡ ಮೋದಿ ಬಂಡವಾಳ ಹೂಡಿಕೆಗೆ ಭಾರತದಲ್ಲಿ ಇರುವ ಅವಕಾಶಗಳ ಬಗ್ಗೆ ವಿವರಿಸಿದರು.ದೇಶದಲ್ಲಿ ಬಂಡವಾಳ ಹೂಡಲು ಉದ್ಯಮಿಗಳಿಕೆ ಕರೆ ನೀಡಿದರು.
ಬಳಿಕ ಅಮೇರಿ ದಿವಾನ್‌ನಲ್ಲಿ ಪ್ರಧಾನಿ ಮೋದಿ ಅವರಿಗೆ ಭವ್ಯ ನಾಗರೀಕ ಸನ್ಮಾನ ಮಾಡಲಾಯಿತು. ನಂತರ ಅಶರು ಅಮೀರ್ ಮತ್ತು ಕತಾರ್‌ನ ಅಧಿಕಾರಿಗಳೊಂದಿಗೆ ನಿಯೋಗ ಹಂತದ ಮಾತುಕತೆ ನಡೆಸಿದರು. ಎರಡೂ ದೇಶಗಳ ನಡುವೆ ಕೌಶಲಾಭಿವೃದ್ಧಿ, ಶ್ರಮಿಕ ವರ್ಗದ ಅನೂಕೂಲ ಅವಕಾಶ ವಿಸ್ತರಣೆ ಗಳು ,ಯುವಕರ ಉದ್ಯೋಗಾವಕಾಶಗಳ ಕುರಿತು ಚರ್ಚೆ ನಡೆಸಿದರು.