ಪಾಕ್ ಹೈ ಕಮಿಷನರ್ ಅಬ್ದುಲ್ ಬಸಿತ್ (ಸಂಗ್ರಹ ಚಿತ್ರ) 
ವಿದೇಶ

5 ನಿಮಿಷದಲ್ಲಿ ದೆಹಲಿ ಮೇಲೆ ದಾಳಿ; ವಿಜ್ಞಾನಿ ಖಾನ್ ಹೇಳಿಕೆ ತಳ್ಳಿ ಹಾಕಿದ ಪಾಕ್

ಕೇವಲ ಐದೇ ನಿಮಿಷದಲ್ಲಿ ಭಾರತ ರಾಜಧಾನಿ ದೆಹಲಿ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಪಾಕಿಸ್ತಾನಕ್ಕೆ ಇದೆ ಎಂಬ ಪಾಕಿಸ್ತಾನದ ಭೌತಶಾಸ್ತ್ರ ವಿಜ್ಞಾನಿ ಅಬ್ದುಲ್ ಖಾದರ್ ಖಾನ್ ಅವರ ಹೇಳಿಕೆಯನ್ನು ಪಾಕಿಸ್ತಾನ ಸರ್ಕಾರ ತಳ್ಳಿಹಾಕಿದೆ.

ನಾಗ್ಪುರ: ಕೇವಲ ಐದೇ ನಿಮಿಷದಲ್ಲಿ ಭಾರತ ರಾಜಧಾನಿ ದೆಹಲಿ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಪಾಕಿಸ್ತಾನಕ್ಕೆ ಇದೆ ಎಂಬ ಪಾಕಿಸ್ತಾನದ ಭೌತಶಾಸ್ತ್ರ ವಿಜ್ಞಾನಿ ಅಬ್ದುಲ್ ಖಾದರ್ ಖಾನ್  ಅವರ ಹೇಳಿಕೆಯನ್ನು ಪಾಕಿಸ್ತಾನ ಸರ್ಕಾರ ತಳ್ಳಿಹಾಕಿದೆ.

ಪಾಕಿಸ್ತಾನದ ಭೌತಶಾಸ್ತ್ರ ವಿಜ್ಞಾನಿ ಅಬ್ದುಲ್ ಖಾದರ್ ಖಾನ್ ಹೇಳಿಕೆಗೆ ವಿಶ್ವಮಟ್ಟದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಸರ್ಕಾರ ವಿಜ್ಞಾನಿ  ಹೇಳಿಕೆಯನ್ನು ತಳ್ಳಿ ಹಾಕಿದೆ. ನಾಗ್ಫುರದಲ್ಲಿ ನಡೆದ ಸ೦ವಾದವೊ೦ದರಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಹೈ ಕಮಿಷನರ್ ಅಬ್ದುಲ್ ಬಸಿತ್ ಅವರು, ವಿಜ್ಞಾನಿ ಅಬ್ದುಲ್ ಖಾದರ್  ಖಾನ್ ಹೇಳಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಅಬ್ದುಲ್ ಖಾದರ್ ಖಾನ್ ವೈಯಕ್ತಿಕವಾಗಿ ಆ ಹೇಳಿಕೆ ನೀಡಿದ್ದು, ಅದು ಸಕಾ೯ರದ ಹೇಳಿಕೆಯಲ್ಲ. ಪಾಕಿಸ್ತಾನದ ಅಣ್ವಸ್ತ್ರಗಳು ಉಗ್ರರ ಕೈ ಸೇರುತ್ತವೆ ಎ೦ಬ ಆತ೦ಕ ಕೂಡ ಅನಗತ್ಯ.  ಪಾಕಿಸ್ತಾನದ ಅಣ್ವಸ್ತ್ರಗಳನ್ನು ಬಹು ಆಯಾಮದ ಭದ್ರತೆಯಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಭಾರತದೊ೦ದಿಗೆ ಶಾ೦ತಿ ಸ೦ಬ೦ಧ ಕಾಯ್ದುಕೊಳ್ಳಲು ಬಯಸುತ್ತೇವೆ ಎ೦ದು ಬಸಿತ್ ಹೇಳಿದ್ದಾರೆ.

ದಾವೂದ್ ಪಾಕಿಸ್ತಾನದಲ್ಲಿಲ್ಲ
ಇದೇ ವೇಳೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುರಿತು ತಮ್ಮ ಮತ್ತದೇ ಹಳೇ ರಾಗವನ್ನು ಮುಂದುವರೆಸಿರುವ ಬಸಿತ್, ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿಲ್ಲ ಎಂದು  ಪುನರುಚ್ಛರಿಸಿದ್ದಾರೆ. ಪಾತಕಿ ದಾವೂದ್ ಇಬ್ರಾಹಿ೦ ಪಾಕಿಸ್ತಾನದಲ್ಲಿರುವ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ ಆತನನ್ನು ಭಾರತಕ್ಕೆ ಹಸ್ತಾ೦ತರಿಸುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎ೦ದು ಬಸಿತ್  ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಸುಂಕ ವಿಧಿಸಬೇಕು: ಕೇಜ್ರಿವಾಲ್

SCROLL FOR NEXT