ಸಾಂದರ್ಭಿಕ ಚಿತ್ರ 
ವಿದೇಶ

ಕೆಲಸ ಮಾಡಿ ಇಲ್ಲ ಬಿಡಿ, ಮಾಸಿಕ ವೇತನ ಮಾತ್ರ 1.70 ಲಕ್ಷ ರು.!

ಕೆಲಸ ಮಾಡಿ ಇಲ್ಲ ಬಿಡಿ ಮಾಸಿಕ ವೇತನ ಮಾತ್ರ 1.70 ಲಕ್ಷ ರು. ಗ್ಯಾರಂಟಿ..ಇಂತಹುದೊಂದು ಐತಿಹಾಸಿಕ ಮಸೂದೆಗಾಗಿ ಸ್ವಿಟ್ಜರ್ಲೆಂಡ್ ನಲ್ಲಿ ಭಾನುವಾರ ಮತದಾನ ಮಾಡಲಾಗುತ್ತಿದ್ದು....

ಜ್ಯೂರಿಚ್: ಕೆಲಸ ಮಾಡಿ ಇಲ್ಲ ಬಿಡಿ ಮಾಸಿಕ ವೇತನ ಮಾತ್ರ 1.70 ಲಕ್ಷ ರು. ಗ್ಯಾರಂಟಿ..ಇಂತಹುದೊಂದು ಐತಿಹಾಸಿಕ ಮಸೂದೆಗಾಗಿ ಸ್ವಿಟ್ಜರ್ಲೆಂಡ್ ನಲ್ಲಿ ಭಾನುವಾರ ಮತದಾನ  ಮಾಡಲಾಗುತ್ತಿದ್ದು, ಮಸೂದೆ ಅನುಮೋದನೆ ಪಡೆದಿದ್ದೇ ಆದರೆ ಇನ್ನು ಮುಂದೆ ಸ್ವಿಟ್ಜರ್ಲೆಂಡ್ ನಲ್ಲಿ ನಿರುದ್ಯೋಗ ಸಮಸ್ಯೆಯೇ ಇರುವುದಿಲ್ಲ.

ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಇಂತಹುದೊಂದು ಐತಿಹಾಸಿಕ ಮಸೂದೆಯನ್ನು ಸ್ವಿಟ್ಜರ್ಲೆಂಡ್ ಸಂಸತ್ತಿನಲ್ಲಿ ಇಂದು ಮಂಡಿಸಲಾಗುತ್ತಿದ್ದು, ದೇಶದ ಉದ್ಯೋಗಸ್ಥರಾಗಿರಲಿ,  ನಿರುದ್ಯೋಗಿಗಳಾಗಿರಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕಡ್ಡಾಯ ಮಾಸಿಕ ವೇತನ ನೀಡುವ ಮಹತ್ವದ ಪ್ರಸ್ತಾವನೆಯೊಂದನ್ನು ಅನುಮೋದನೆಗಾಗಿ ಮಂಡಿಸುತ್ತಿದೆ. ಈ ನೂತನ  ಮಸೂದೆಯ ಪ್ರಕಾರ ಆತ ಕೆಲಸ ಮಾಡಲಿ ಬಿಡಲಿ ಸ್ವಿಟ್ಜರ್ಲೆಂಡ್ ದೇಶದ ಪ್ರತಿಯೊಬ್ಬ ಪ್ರಜೆಗೂ ಕಡ್ಡಾಯ ಮಾಸಿಕ ವೇತನ ನೀಡಲಾಗುತ್ತದೆ. ಅದೂ ಕೂಡ ಮಾಸಿಕ 2,500 ಸ್ವಿಸ್ ಫ್ರಾಂಕ್ಸ್  (ಸುಮಾರು 1.70ಲಕ್ಷ ರು.). ಆದರೆ ಈ ನೂತನ ನಿಯಮದಡಿಯಲ್ಲಿ ಸರ್ಕಾರದ ಈ ಸೌಲಭ್ಯ ಪಡೆಯುವ ಪ್ರಜೆ ಇದಕ್ಕಿಂತ ಹೆಚ್ಚಾಗಿ ಆದಾಯಗಳಿಸಲು ಸಾಧ್ಯವೇ ಇಲ್ಲದಂತೆ ನೂತನ  ಕಾಯ್ದೆಯನ್ನು ಸಿದ್ಧಪಡಿಸಲಾಗುತ್ತಿದೆ.

ಮೂಲಗಳ ಪ್ರಕಾರ ಈಗಾಗಲೇ ಸ್ವಿಸ್ ಪ್ರಜೆಗಳು ಮಾಸಿಕ 2500 ಸ್ವಿಸ್ ಫ್ರಾಂಕ್ಸ್ ಆದಾಯ ಗಳಿಸುತ್ತಿದ್ದು, ಇದೇ ಆದಾಯವನ್ನು ಕಡ್ಡಾಯ ಮಾಸಿಕ ವೇತನವಾಗಿ ನೀಡಲು ಸ್ವಿಸ್ ಸರ್ಕಾರ  ನೂತನ ಕಾಯ್ದೆಯನ್ನು ಮಂಡಿಸುತ್ತಿದೆ. ಇಲ್ಲಿನ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿರುವಂತೆ ಸ್ವಿಟ್ಜರ್ಲೆಂಡ್ ನಲ್ಲಿ ಶೇ.50 ಸೇವೆಗಳು ರೋಬೋಟ್ ಗಳಿಂದಾಗುತ್ತಿದ್ದು, ಇದರಿಂದ ಜನ ನೌಕರಿ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ವಿವಿಧ ಸಮುದಾಯಗಳಲ್ಲಿ ಉಚಿತ ಸೇವೆಗಳು ಚಾಲ್ತಿಯಲ್ಲಿದ್ದು,  ಹೀಗಾಗಿ ಇಲ್ಲಿನ ನಾಗರೀಕರ ಆದಾಯ ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜನರೇ ಮ೦ಡಿಸಿದ ವಿಧೇಯಕ
ಸ್ವಿಟ್ಜಲೆ೯೦ಡ್‍ನಲ್ಲಿ ನೇರ ಪಾಲ್ಗೊಳ್ಳುವಿಕೆ (ಡೈರೆಕ್ಟ್ ರೆಪ್ರಸೆ೦ಟೇಷನ್) ಎ೦ಬ ಸ೦ಸದೀಯ ವ್ಯವಸ್ಥೆಯಿದೆ. ಈ ವ್ಯವಸ್ಥೆಯಲ್ಲಿ ಸಕಾ೯ರದ ಯಾವುದೇ ನೀತಿಯನ್ನು ನಾಗರಿಕರು ಪ್ರಶ್ನಿಸಬಹುದು. 100 ದಿನಗಳ ಅವಧಿಯಲ್ಲಿ 50,000 ಸಹಿ ಸ೦ಗ್ರಹ ಮಾಡಿದರೆ ಆ ವಿಧೇಯಕದ ಬಗ್ಗೆ ಸ೦ಸತ್‍ನಲ್ಲಿ ಮರುಮತದಾನ ನಡೆಸಬೇಕಾಗುತ್ತದೆ. ಇದೇ ಮಾದರಿಯಲ್ಲಿ ನಾಗರಿಕರು ವಿಧೇಯಕ ವನ್ನೂ ಮ೦ಡನೆ ಮಾಡಬಹುದು. ವಿಧೇಯಕ ಮ೦ಡನೆಗೆ ಒ೦ದೂವರೆ ವಷ೯ದಲ್ಲಿ 1 ಲಕ್ಷ ಸಹಿ ಸ೦ಗ್ರಹ ಮಾಡಬೇಕು ಎ೦ಬ ನಿಯಮವಿದೆ. ಈ ಮಾದರಿಯಲ್ಲಿ ಬೇಸಿಕ್ ಇನ್‍ಕ೦ ವಿಧೇಯಕ ನಾಗರಿಕರಿ೦ದ ಮ೦ಡನೆಯಾಗಿದೆ.

ಕಾರಣವೇನು?
21ನೇ ಶತಮಾನದಲ್ಲಿ ಹೆಚ್ಚಿನ ಕೆಲಸಗಳು ರೋಬಾಟ್‍ಗಳಿ೦ದಲೇ ನಡೆಯುತ್ತಿರುವುದರಿ೦ದ ಹೆಚ್ಚು ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಮೂಲ ವೇತನದ ಅಗತ್ಯವಿದೆ ಎ೦ಬುದು ಈ ಪ್ರಸ್ತಾವನೆ ಬೆ೦ಬಲಿಸುವವರ ವಾದ. ಇದಕ್ಕಾಗಿ ಜ್ಯೂರಿಚ್‍ನ ಬೀದಿಗಳಲ್ಲಿ ರೋಬಾಟ್‍ಗಳ ನೃತ್ಯ ಪ್ರದಶ೯ನದ ಮೂಲಕ ಇವರು ಪ್ರಚಾರಗಳನ್ನೂ ನಡೆಸುತ್ತಿದ್ದಾರೆ.

1.71 ಲಕ್ಷ ಕೋಟಿ ರು. ಬೇಕು
ದೇಶದ ಎಲ್ಲ ನಾಗರಿಕರಿಗೂ ಮಾಸಿಕ ವೇತನ ನೀಡುವುದಕ್ಕೆ ಸ್ವಿಜಲೆ೯೦ಡ್ ಸಕಾ೯ರಕ್ಕೆ 1.71 ಲಕ್ಷ ಕೋಟಿ ರು. ಅಗತ್ಯವಿದೆ. ಈ ಮೊತ್ತವನ್ನು ಭರಿಸಲು ಸಕಾ೯ರಿ ಭಾರಿ ವೆಚ್ಚ ಕಡಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಈ ಕಾರಣಕ್ಕೆ ಸ್ವಿಸ್ ಸಕಾ೯ರ ಈ ಯೋಜನೆಯನ್ನು ವಿರೋಧಿಸುತ್ತಿದ್ದು, ವಿರೋಧಿಸಿ ಮತ ಹಾಕುವ೦ತೆ ಜನರ ಮನವೊಲಿಸುತ್ತಿದೆ. ಅಲ್ಲದೆ ಯಾವ ರಾಜಕೀಯ ಪಕ್ಷವೂ ಈವರೆಗೆ ಈ ಪ್ರಸ್ತಾವನೆ ಪರವಾಗಿ ನಿ೦ತಿಲ್ಲ.

ಇನ್ನು ಒಂದು ವೇಳೆ ಈ ಮಸೂದೆ ಅನುಮೋದನೆಗೊಂಡಲ್ಲಿ ಅಲ್ಲಿನ ಜನರು ಮನೆಯಲ್ಲೇ ಕುಳಿತು ಪ್ರತಿ ತಿಂಗಳು 1.70 ಲಕ್ಷ ರು. ಎಣಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT