ವಿದೇಶ

ಸ್ವಿಟ್ಜರ್ಲ್ಯಾಂಡ್ ತಲುಪಿದ ಪ್ರಧಾನಿ ಮೋದಿ: ಕಪ್ಪುಹಣ, ಎನ್ಎಸ್ ಜಿ ಸದಸ್ಯತ್ವ ಮಾತುಕತೆಯ ಪ್ರಮುಖ ಕಾರ್ಯಸೂಚಿ

Srinivas Rao BV

ಜಿನೀವಾ:ಕತಾರ್ ಪ್ರವಾಸ ಯಶವಿಯಾಗಿ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಸ್ವಿಟ್ಜರ್ಲ್ಯಾಂಡ್ ತಲುಪಿದ್ದಾರೆ.

ಐದು ರಾಷ್ಟ್ರಗಳ ಪ್ರವಾಸದ ಪೈಕಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಿಟ್ಜರ್ಲ್ಯಾಂಡ್ ಭೇಟಿ ಕಪ್ಪುಹಣ ಹಾಗೂ ಎನ್ಎಸ್ ಜಿ ಸಮೂಹದಲ್ಲಿ ಭಾರತ ಸದಸ್ಯತ್ವ ಪಡೆಯುವ ದೃಷ್ಟಿಯಿಂದ ಮಹತ್ವ ಪಡೆದಿದ್ದು, ಈ ಎರಡು ಅಂಶಗಳೇ ಸಿಟ್ಜರ್ಲ್ಯಾಂಡ್ ನ ಪ್ರವಾಸದ ಪ್ರಮುಖ ಕಾರ್ಯಸೂಚಿಯಾಗಿವೆ. ಜೂ.6 ರಂದು ಪ್ರಧಾನಿ ನರೇಂದ್ರ ಮೋದಿ ಸ್ವಿಟ್ಜರ್ಲ್ಯಾಂಡ್ ನ ಅಧ್ಯಕ್ಷ ಜೊಹಾನ್ ಷ್ನೇಯ್ಡರ್ ಅಮಾನ್ ಅವರನ್ನು ಭೇಟಿ ಮಾಡಲಿದ್ದು ಸ್ವಿಟ್ಜರ್ಲ್ಯಾಂಡ್ ನಲ್ಲಿರುವ ಭಾರತದ ಕಪ್ಪು ಹಣದ ಬಗ್ಗೆ ಚರ್ಚಿಸಿ ಎನ್ಎಸ್ ಜಿ ಸಮೂಹದಲ್ಲಿ ಭಾರತ ಸದಸ್ಯತ್ವ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಬಲ ಕೋರಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಿಟ್ಜರ್ಲ್ಯಾಂಡ್ ಭೇಟಿಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್, ಸ್ವಿಟ್ಜರ್ಲ್ಯಾಂಡ್ ಎನ್ಎಸ್ ಜಿ ಸಮೂಹದ ಪ್ರಮುಖ ದೇಶವಾಗಿದ್ದು ಭಾರತದ ಸದಸ್ಯತ್ವಕ್ಕೆ ಬೆಂಬಲ ನಿಡುವ ವಿಚಾರ ಚರ್ಚೆಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಕಪ್ಪುಹಣದ ಬಗ್ಗೆಯೂ ಮಾತನಾಡಿರುವ ಜೈಶಂಕರ್, ಭಾರತ ಸರ್ಕಾರ ಈ ವಿಚಾರವಾಗಿ ಸ್ವಿಸ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.

SCROLL FOR NEXT