ನವದೆಹಲಿ: ಕಳೆದ ತಿಂಗಳು ಭಾರತ ಮತ್ತು ಇರಾನ್ ಬಹು ಕೋಟಿ ಡಾಲರ್ ಮೊತ್ತದ ಚಬಹರ್ ಬಂದರು ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಿದ್ದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಚೀನಾ, ಈ ಒಪ್ಪಂದದ ಬಗ್ಗೆ ಅಸೂಯೆ ಇಲ್ಲವೆಂದು ಮತ್ತು ಇದರಿಂದ ತನ್ನ ದೇಶದ ಬಹುರಾಷ್ಟ್ರೀಯ ಕಂಪೆನಿಗಳಿಗೆ ಲಾಭವಿದೆ ಎಂದು ಹೇಳಿತ್ತು.
ಆದರೆ ಈಗ ರಾಗ ಬದಲಾಯಿಸಿರುವ ಚೀನಾ ಮಧ್ಯ ಪ್ರಾಚ್ಯದಲ್ಲಿ ಭಾರತದ ಮಹಾಪಾತಕ ಒಪ್ಪಂದವಿದು ಎಂದು ಬಣ್ಣಿಸಿದೆ.
ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ ಲೇಖನದಲ್ಲಿ ಮಂಗಳವಾರ ಚೀನಾ ಸರ್ಕಾರದ ಹೇಳಿಕೆಯನ್ನು ಪ್ರಕಟಿಸಿದ್ದು, ಅದರಲ್ಲಿ '' ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ನಲ್ಲಿ ವ್ಯಾಪಾರ ಅಭಿವೃದ್ಧಿ, ಗಣಿ, ನೈಸರ್ಗಿಕ ಅನಿಲ, ತೈಲವನ್ನು ತೆಗೆಯುವುದು ಒಪ್ಪಂದದ ಉದ್ದೇಶ ಎಂದು ಹೇಳಿಕೊಂಡಿದ್ದರೂ ಕೂಡ, ಆರ್ಥಿಕ ದೃಷ್ಟಿಯಿಂದ ಚಬಹರ್ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಭಾರತ ಹೇಳಿಕೊಂಡರೂ ಕೂಡ ಈ ಒಪ್ಪಂದ ಮಹಾತ್ವಾಕಾಂಕ್ಷೆಯ ಲೆಕ್ಕಾಚಾರದ ಒಪ್ಪಂದವಾಗಿದೆ ಎಂದರು.
500 ದಶಲಕ್ಷ ಡಾಲರ್ ಮೊತ್ತದ ಚಬಹರ್ ಒಪ್ಪಂದ ಕಾರ್ಯಗತವಾಗುವುದಿಲ್ಲ, ಯೋಜನೆ ವಿಫಲವಾಗುತ್ತದೆ ಎಂದರು.