ವಿದೇಶ

ಮಗುವಿನ ರಕ್ಷಣೆಗೆ ಗೊರಿಲ್ಲಾ ಹತ್ಯೆ: ಪ್ರಕರಣದಿಂದ ಪೋಷಕರು ಪಾರು

Mainashree
ವಾಷಿಂಗ್ಟನ್: ಕಳೆದ ಕೆಲವು ದಿನಗಳ ಹಿಂದೆ ಮಗುವನ್ನು ರಕ್ಷಿಸುವ ಸಲುವಾಗಿ ಗೊರಿಲ್ಲಾಗೆ ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣ ಸಂಬಂಧ ಮಗುವಿನ ಪೋಷಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಿಲ್ಲ ಎಂದು ಅಲ್ಲಿನ ವಕೀಲರು ತಿಳಿಸಿದ್ದಾರೆ.
ಮಗುವಿನ ತಾಯಿಗೆ ಇನ್ನು ಇಬ್ಬರು ಮಕ್ಕಳಿದ್ದು, ಅವರ ಕಡೆ ಗಮನ ಹರಿಸಿದಾಗ ಈ ಮಗು ಗೊರಿಲ್ಲಾ ಪಾರ್ಕ್ ನೊಳಗೆ ಬಿದ್ದಿದೆ. ಮೂರು ಮಕ್ಕಳೊಂದಿಗೆ ಪೋಷಕರು ಪಾರ್ಕಿಗೆ ಆಗಮಿಸಿದ್ದರು, ಎಲ್ಲಾ ಮಕ್ಕಳ ಕಡೆಗೆ ಒಂದೇ ಬಾರಿ ಗಮನ ಹರಿಸಲು ಸಾಧ್ಯವಾಗವುದಿಲ್ಲ. ಮಕ್ಕಳು ಅತ್ತಿಂದಿತ್ತ ಓಡಾಡುತ್ತಿರುತ್ತವೆ. ಇನ್ನೊಂದು ಮಗುವನ್ನು ನೋಡಿಕೊಂಡು ಈ ಬಾಲಕನತ್ತ ತಿರುಗುವಷ್ಟರಲ್ಲಿ ಗೋರಿಲ್ಲಾ ಪಾರ್ಕಿನೊಳಗೆ ಬಾಲಕ ಬಿದ್ದಿದ್ದಾನೆ. ಈ ಹಿನ್ನಲೆಯಲ್ಲಿ ಇದರಲ್ಲಿ ಪೋಷಕರದು ಯಾವುದೇ ದೋಷವಿಲ್ಲ ಎಂದು ವಕೀಲರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. 
ಗೊರಿಲ್ಲಾ ಹತ್ಯೆಗೆ ನ್ಯಾಯ ಒದಗಿಸಬೇಕೆಂಬ ಮನವಿಗೆ ಕೇವಲ 24 ಗಂಟೆಗಳಲ್ಲಿ 8 ಸಾವಿರ ಮಂದಿ ಸಹಿ ಹಾಕಿದ್ದರು. ಆದರೆ, ಸಾಮಾನ್ಯವಾಗಿ ಇಂತಹ ಘಟನೆಗಳು ಆಕಸ್ಮಿಕವಾಗಿ ಸಂಭವಿಸುವುದರಿಂದ ಪೋಷಕರ ತಪ್ಪು ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
SCROLL FOR NEXT