ಜೆನ್ನಿಫರ್ - ಬ್ರಾಡ್ ಲೀಸನ್
ನ್ಯೂಯಾರ್ಕ್: ತಾನು ಇನ್ನೂ ತಾಯಿಯಾಗದಿದ್ದರೂ ತನ್ನ ಬಾಯ್ ಫ್ರೆಂಡ್ ಗೆ ಮೊಲೆ ಹಾಲೂಡಿಸುವುದಕ್ಕಾಗಿ ಅಟ್ಲಾಂಟಾದ ಮಹಿಳೆಯೊಬ್ಬಳು ತನ್ನ ಕೆಲಸಕ್ಕೆ ಗುಡ್ ಬೈ ಹೇಳಿದ್ದಾರೆ.
ಹೌದು, ಇದು ಅಚ್ಚರಿ ಅನಿಸಿದರು ನಿಜ. ಜೆನ್ನಿಫರ್ ಮುಲ್‌ಫರ್ಡ್ ಎಂಬ ಮಹಿಳೆ ತನ್ನ ಬಾಡಿಬಿಲ್ಡರ್ ಬಾಯ್ ಫ್ರೆಂಡ್‌ಗೆ ಮೊಲೆ ಹಾಲೂಡಿಸುವುದಕ್ಕಾಗಿ ತನ್ನ ಉದ್ಯೋಗಕ್ಕೆ ರಾಜಿನಾಮೆ ಕೊಟ್ಟಿದ್ದಾಳೆ. ಅಲ್ಲದೆ ಈ ವಿಲಕ್ಷಣ ಸಂಗತಿಯನ್ನು ಜೆನ್ನಿಫರ್ ಗುಟ್ಟಾಗಿ ಇಟ್ಟಿಲ್ಲ. ಅದನ್ನು ಬಹಿರಂಗವಾಗಿ ಎಲ್ಲರಿಗೂ ಹೇಳಿದ್ದಾಳೆ.
'ನನ್ನ ಬಾಯ್ ಫ್ರೆಂಡ್ ಬ್ರಾಡ್ ಲೀಸನ್(36) ಜತೆಗೆ ನಾನು ವಯಸ್ಕರ ಮೊಲೆ ಹಾಲೂಡಿಕೆ ಬಾಂಧವ್ಯವನ್ನು ಜಗಜ್ಜಾಹೀರು ಮಾಡಲು ಬಯಸಿದ್ದೇನೆ' ಎಂದು ಜೆನ್ನಿಫರ್ ಹೇಳಿಕೊಂಡಿರುವುದಾಗಿ ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.
ಇಷ್ಟಕ್ಕೂ ಜೆನ್ನಿಫರ್ ಗೆ ವಯಸ್ಕರ ಮೊಲೆ ಹಾಲೂಡಿಸುವಿಕೆಯಲ್ಲಿ ಈ ಬಗೆಯ ವಿಶೇಷ ಆಸ್ಥೆ ಮೂಡಲು ಕಾರಣವೇನೆಂದು ಕೇಳುವಿರಾ? ಜೆನ್ನಿಫರ್ ಪ್ರಕಾರ ಮಹಿಳೆ ತನ್ನ ಜೀವನ ಸಂಗಾತಿಗೆ (ಬಾಯ್ ಫ್ರೆಂಡ್, ಪತಿ, ಇತ್ಯಾದಿ) ಮೊಲೆ ಹಾಲೂಡಿಸಿದರೆ ಅವರೊಳಗಿನ ಪ್ರೀತಿ, ಮಮತೆ, ವಾತ್ಸಲ್ಯ ಮುಂತಾದ ಬಗೆಯ ಬಾಂಧವ್ಯಗಳು ಗಟ್ಟಿಯಾಗಿ ಅವರು ಜೀವನ ಪೂರ್ತಿ ಜತೆಗಾರರಾಗಿರುತ್ತಾರಂತೆ!
ಇನ್ನು ತನ್ನ ಗರ್ಲ್ ಫ್ರೆಂಡ್ ಅಭಿಪ್ರಾಯಕ್ಕೆ ಧ್ವನಿಗೂಡಿಸಿರುವ ಬಾಡಿ ಬಿಲ್ಡರ್ ಬಾಯ್ ಫ್ರೆಂಡ್ ಬ್ರಾಡ್, 'ನಾವೀಗ ವೇಳಾ ಪಟ್ಟಿ ಪ್ರಕಾರ ಮೊಲೆ ಹಾಲೂಡಿಸುವಿಕೆಯನ್ನು ಕೈಗೊಳ್ಳುತ್ತಿದ್ದೇವೆ. ಎರಡು ತಾಸಿಗೆ ಅಥವಾ ಮೂರು ತಾಸಿಗೊಮ್ಮೆ ಎಂಬಂತೆ ನಾವಿದನ್ನು ಮಾಡುತ್ತಿದ್ದೇವೆ. ನಿಂತಿದ್ದಾಗ, ಹಾಸಿಗೆಯಲ್ಲಿ ಮಲಗಿಕೊಂಡಿರುವಾಗ, ಊಟದ ಹೊತ್ತಿನಲ್ಲಿ ಮಧ್ಯಾಹ್ನ ಮನೆಗೆ ಬಂದಾಗ ನಾವಿದನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾನೆ.
ಇದು ನಮ್ಮೊಳಗಿನ ಬಾಂಧವ್ಯವನ್ನು ಗಟ್ಟಿಗೊಳಿಸಿದೆ. ಪ್ರೀತಿ, ಮಮತೆ, ವಾತ್ಸಲ್ಯವನ್ನು ಹೆಚ್ಚಿಸಿದೆ. ನಾವಿಬ್ಬರೂ ಪರಸ್ಪರರಿಗೆ ತುಂಬಾ ಹತ್ತಿರವಾಗಿದ್ದೇವೆ ಎಂದು ಬ್ರಾಡ್ ಮೆಲ್ಬೋರ್ನ್ ರೇಡಿಯೋ ಶೋ ಮ್ಯಾಟ್ ಆ್ಯಂಡ್ ಮೆಶೆಲ್ (ಕೆಐಐಎಸ್ 101.02) ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾನೆ.
ಬ್ರಾಡ್ ಗೆ ಮೊಲೆ ಹಾಲೂಡಿಸುವ ಏಳು ಸಂದರ್ಭಗಳ ಪೈಕಿ ಆರರಲ್ಲಿ ತಾವು ಸೆಕ್ಸ್ ನಡೆಸುವ ಹಂತ ತಲುಪಿದ್ದು, ಇದರಿಂದ ತಮ್ಮೊಳಗಿನ ಮಾನಸಿಕ, ದೈಹಿಕ, ಲೈಂಗಿಕ ಸಂಬಂಧಗಳು ಸಾಕಷ್ಟು ಬಲಗೊಳ್ಳುವಂತಾಗಿದೆ ಎಂದು ಜೆನ್ನಿಫರ್ ಹೇಳುತ್ತಾಳೆ.