ವಿದೇಶ

ಬಾಂಗ್ಲಾ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ; ೯೦೦ ಜನ ವಶಕ್ಕೆ

Guruprasad Narayana

ಢಾಕಾ: ಬಾಂಗ್ಲಾ ದೇಶ ನಡೆಸಿದ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯ ಮೊದಲ ದಿನವಾದ ಶುಕ್ರವಾರ ಪೊಲೀಸರು ಸುಮಾರು ೯೦೦ ಜನರನ್ನು ವಶಕ್ಕೆ ಪಡೆದಿದ್ದಾರೆ.

ಒಂದು ವಾರ ನಡೆಯಲಿರುವ ಈ ಕಾರ್ಯಾಚರಣೆಯ ಮುಖ್ಯ ಧ್ಯೇಯ ಭಯೋತ್ಪಾದಕೆ ನೆಲೆಗಳ ಮೇಲೆ ದಾಳಿ ಮಾಡಿ ದೇಶದಾದ್ಯಂತ ಅವರ ಜಾಲಕ್ಕೆ ಕಡಿವಾಣ ಹಾಕುವುದು ಎಂದು ಪೊಲೀಸ್ ಇಸ್ಪೆಕ್ಟರ್ ಜನರಲ್ ಎ ಕೆ ಎಂ ಶಾಹಿದುಲ್ ಹಕ್ ಹೇಳಿದ್ದಾರೆ.

ಶುಕ್ರವಾರವಷ್ಟೇ ಢಾಕಾದಿಂದ ೨೧೬ ಕಿಮೀ ದೂರದಲ್ಲಿರುವ ಪಬ್ನಾ ಜಿಲ್ಲೆಯ ಹಿಂದು ದೇವಾಲಯದ ಸಿಬ್ಬಂದಿಯೊಬ್ಬನನ್ನು ಬರ್ಬರವಾಗಿ ಕೊಲೆಗೈಯ್ಯಲಾಗಿತ್ತು. ಈ ಕೊಲೆಗೆ ಕಾರಣ ಇನ್ನು ತಿಳಿದುಬಂದಿಲ್ಲ ಎಂದು ಜಿಲ್ಲ ಪೊಲೀಸ್ ಅಧ್ಯಕ್ಷ ಅಲಮ್ಗೀರ್ ಕಬೀರ್ ಹೇಳಿದ್ದರು.

೨೦೧೩ ರಿಂದ ಇತ್ತೀಚೆಗೆ ಇಂತಹ ಹಿಂಸೆಯ ದಾಳಿಗಳು ತೀವ್ರಗೊಂಡಿವೆ. ಹಲವಾರು ಜಾತ್ಯಾತೀತ ಬ್ಲಾಗರ್ ಗಳು, ಬರಹಗಾರರು ಮತ್ತು ಪ್ರಕಾಶಕರನ್ನು ತೀವ್ರವಾದಿಗಳು ಕೊಂದು ಹಾಕಿದ್ದಾರೆ.

SCROLL FOR NEXT