ಪ್ಯಾರಿಸ್ ಪೊಲೀಸ್ ಅಧಿಕಾರಿ ಹತ್ಯೆ (ರಾಯಿಟರ್ಸ್ ಚಿತ್ರ) 
ವಿದೇಶ

ಪ್ಯಾರಿಸ್ ಮೇಲೆ ಮತ್ತೆ ಮುಗಿಬಿದ್ದ ಇಸಿಸ್: ಚಾಕುವಿನಿಂದ ಇರಿದು ಪೊಲೀಸ್ ಅಧಿಕಾರಿ ಹತ್ಯೆ

ಇಸಿಸ್ ಉಗ್ರಗಾಮಿ ಸಂಘಟನೆಗೆ ಸೇರಿದ ಉಗ್ರನೊಬ್ಬ ಪೊಲೀಸ್ ಅಧಿಕಾರಿಯೋರ್ವನನ್ನು ಚಾಕುವಿನಿಂದ ಇರಿದು ಕೊಂದು ಹಾಕಿರುವ ಘಟನೆ ಸೋಮವಾರ ತಡರಾತ್ರಿ ಪ್ಯಾರಿಸ್ ನಲ್ಲಿ ನಡೆದಿದೆ.

ಪ್ಯಾರಿಸ್: ಕೆಲವೇ ತಿಂಗಳ ಹಿಂದಷ್ಟೇ ಪ್ಯಾರಿಸ್ ಮೇಲೆ ಉಗ್ರರು ನಡೆಸಿದ ದಾಳಿ ಮರೆಯುವ ಮುನ್ನವೇ ಮತ್ತೊಂದು ಉಗ್ರ ದಾಳಿ ನಡೆದಿದ್ದು, ಇಸಿಸ್ ಉಗ್ರಗಾಮಿ ಸಂಘಟನೆಗೆ ಸೇರಿದ  ಉಗ್ರನೊಬ್ಬ ಪೊಲೀಸ್ ಅಧಿಕಾರಿಯೋರ್ವನನ್ನು ಚಾಕುವಿನಿಂದ ಇರಿದು ಕೊಂದು ಹಾಕಿರುವ ಘಟನೆ ಸೋಮವಾರ ತಡರಾತ್ರಿಯಲ್ಲಿ ನಡೆದಿದೆ.

ಮೂಲಗಳ ಪ್ರಕಾರ ದಾಳಿ ನಡೆಸಿದ ಉಗ್ರ 2013ರಲ್ಲಿ ನಿಷೇಧಿತ ಉಗ್ರ ಸಂಘಟನೆ ಇಸಿಸ್ ಗೆ ನೆರವು ನೀಡಿದ ಆರೋಪದ ಮೇಲೆ 3 ವರ್ಷಗಳ ಕಾಲ ಸೆರೆವಾಸ ಅನುಭವಿಸಿ ಇತ್ತೀಚೆಗಷ್ಟೇ  ಹೊರಗೆ ಬಂದಿದ್ದ. ಹೊರಗೆ ಬರುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಯ ಮನೆಗೆ ತೆರಳಿ ಆತನನ್ನು ಅಲ್ಲಿಯೇ ಚಾಕುವಿನಿಂದ ಇರಿದು ಕೊಂದು ಹಾಕಿದ್ದಾನೆ. ಅಲ್ಲದೆ ಅಲ್ಲಿದ್ದ ಮಗುವನ್ನು ಉಗ್ರ  ಒತ್ತೆಯಾಳುಗಳಾಗಿರಿಸಿಕೊಂಡಿದ್ದ. ಇನ್ನು ಪೊಲೀಸರು ತಿಳಿಸಿರುವಂತೆ ಪೊಲೀಸ್ ಅಧಿಕಾರಿಯ ಹತ್ಯೆ ನಡೆದ ಸ್ಥಳದಲ್ಲೇ ಮತ್ತೋರ್ವ ಅಧಿಕಾರಿಯ ಶವ ದೊರೆತ್ತಿದ್ದು, ಅದನ್ನು ಕೂಡ ದಾಳಿ  ನಡೆಸಿದ ಉಗ್ರನೇ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.

ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪ್ಯಾರಿಸ್ ಸೈನಿಕರು ಮಗುವನ್ನು ಬಿಡಿಸುವ ನಿಟ್ಟಿನಲ್ಲಿ ಸಂಧಾನ ನಡೆಸಿದ್ದಾರೆ. ಆದರೆ ಸಂಧಾನ ವಿಫಲವಾದ ಹಿನ್ನಲೆಯಲ್ಲಿ  ಕಾರ್ಯಾಚರಣೆ ನಡೆಸಿದ ಸೈನಿಕರು ಉಗ್ರನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತೆಯೇ ಮಗುವನ್ನು ಕೂಡ ಸುರಕ್ಷಿತವಾಗಿ ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು  ಉಗ್ರದಾಳಿ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತಿದ್ದು, ದಾಳಿ ನಡೆಸಿದ ವ್ಯಕ್ತಿ ತನ್ನ ಪಡೆಯ ಸೈನಿಕ ಎಂದು ತನ್ನ ಮುಖವಾಣಿ ಅಮಾಖ್ ನಲ್ಲಿ ತಿಳಿಸಿದೆ.

ಪ್ಯಾರಿಸ್ ನಾದ್ಯಂತ ಹೈಅಲರ್ಟ್
ಇದೇ ವೇಳೆ ಅತ್ತ ಪೊಲೀಸ್ ಅಧಿಕಾರಿಯನ್ನು ಕೊಂದ ಇಸಿಸ್ ಉಗ್ರನನ್ನು ಹೊಡೆದುರುಳಿಸುತ್ತಿದ್ದಂತೆಯೇ ಪ್ಯಾರಿಸ್ ನಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ  ಸೈನಿಕರು ತೀವ್ರ ಶೋಧ ನಡೆಸುತ್ತಿದ್ದಾರೆ. ಇನ್ನು ಫ್ರಾನ್ಸ್ ಪ್ರಧಾನಿ ನಿಕೋಲಸ್ ಹೊಲಾಂಡ್ ತುರ್ತು ಭದ್ರತಾ ಸಭೆ ಕರೆದಿದ್ದು, ಭದ್ರತಾ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!