ವಿದೇಶ

ಒರ್ಲಾಂಡೋ ಶೂಟರ್ ದಾಳಿ ನಡೆಸುವ ಬಗ್ಗೆ ಆತನ ಪತ್ನಿಗೆ ತಿಳಿದಿತ್ತು: ಶಿಕ್ಷೆ ಸಾಧ್ಯತೆ

Sumana Upadhyaya

ಒರ್ಲಾಂಡೋ: ಸಲಿಂಗಕಾಮಿಗಳ ನೈಟ್ ಕ್ಲಬ್ ನಲ್ಲಿ ಶೂಟೌಟ್ ನಡೆಸಿ 50ಕ್ಕೂ ಹೆಚ್ಚು ಜನರ ಸಾವಿಗೆ ಕಾರಣನಾಗಿದ್ದ ಬಂದೂಕುಧಾರಿಯ ಪತ್ನಿಗೆ ಆತ ದಾಳಿ ನಡೆಸುವ ಬಗ್ಗೆ ಮೊದಲೇ ಮಾಹಿತಿಯಿತ್ತು ಎಂದು ಕಾನೂನು ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
ಈ ಸಂಬಂಧ ಸಂಯುಕ್ತ ರಾಷ್ಟ್ರದ ಅತ್ಯುಚ್ಛ ತೀರ್ಪುಗಾರರನ್ನು ನೇಮಿಸಲಾಗಿದ್ದು, ಉಮರ್ ಮತೀನ್ ನ ಪತ್ನಿ ನೂರ್ ಸಲ್ಮಾನ್ ಗೆ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ದಾಳಿ ನಡೆಸುವ ಬಗ್ಗೆ ಪತ್ನಿಯಲ್ಲಿ ಉಮರ್ ಮತೀನ್ ಚರ್ಚೆ ನಡೆಸಿದ್ದನಂತೆ. ಎಲ್ಲಿ ದಾಳಿ ಮಾಡಬಹುದು ಎಂದು ಮೊದಲೇ ಹೋಗಿ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದನಂತೆ. ಒಮ್ಮೆ ಪಲ್ಸ್ ನೈಟ್ ಕ್ಲಬ್ ಗೆ ಹೋಗಿ ಅಲ್ಲಿ ದಾಳಿ ಮಾಡಲೆತ್ನಿಸಿದ್ದ ಎಂದು ಸಲ್ಮಾನ್ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ನೂರ್ ಸಲ್ಮಾನ್ ಗೆ ಕೂಡ ಏನು ನಡೆಯಬಹುದು ಎಂಬುದರ ಬಗ್ಗೆ ಮಾಹಿತಿಯಿತ್ತು ಎಂದು ಯುಎಸ್ ಸೆನೇಟರ್ ಅಂಗುಸ್ ಕಿಂಗ್ ತಿಳಿಸಿದ್ದಾರೆ. ಮತೀನ್ ನೈಟ್ ಕ್ಲಬ್ ಮೇಲೆ ದಾಳಿ ನಡೆಸಿದ ಮೂರು ಗಂಟೆಗಳ ನಂತರ 911 ಸಂಖ್ಯೆಗೆ ಕರೆ ಮಾಡಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದ್ದ ಎಂದು ತಿಳಿದುಬಂದಿದೆ. ಆದರೆ ಅವನೇ ಸ್ವತಃ ಈ ದಾಳಿ ನಡೆಸಿದ್ದು, ಯಾವುದೇ ಭಯೋತ್ಪಾದಕ ಸಂಘಟನೆಗಳಿಂದ ಸಹಾಯ ಅಥವಾ ಸೂಚನೆ ಪಡೆದಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

SCROLL FOR NEXT