ವಾಶಿಂಗ್ಟನ್: ಅಮೆರಿಕಾದ ರಿಪಬ್ಲಿಕನ್ ಪಕ್ಷದ ಸಂಭವನೀಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಅನ್ ಅವರನ್ನು ಅಮೆರಿಕಾಕ್ಕೆ ಆಹ್ವಾನಿಸಲಿದ್ದೇನೆ ಆದರೆ ಅಧಿಕೃತ ಸರ್ಕಾರಿ ಔತಣಕೂಟಕ್ಕಲ್ಲ ಎಂದಿದ್ದಾರೆ.
ಇದಕ್ಕೂ ಮುಂಚಿತವಾಗಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಗಲಿದ್ದಾರೆ ಎನ್ನಲಾಗಿರುವ ಹಿಲರಿ ಕ್ಲಿಂಟನ್ - ಟ್ರಂಪ್, ಕಿಮ್ ಜೊತೆ ಮಾತುಕತೆ ನಡೆಸುವುದಕ್ಕೆ ಉತ್ಸುಕರಾಗಿರುವುದನ್ನು ಟೀಕಿಸಿದ್ದರು. ಇದಕ್ಕೆ ಬುಧವಾರ ಪ್ರತಿಕ್ರಿಯಿಸಿರುವ ಉದ್ದಿಮೆ ದೈತ್ಯ, ಮಾಜಿ ಶ್ವೇತಭವನದ ಕಾರ್ಯದರ್ಶಿಗೆ ಪ್ರೌಢತೆ ಇಲ್ಲ ಎಂದಿದ್ದಾರೆ.
"ಅವರು ಇದನ್ನೇ ಮಾಡುತ್ತಿದ್ದು ಆವರಿಗೆ ಇವೆಲ್ಲವೂ ಅರ್ಥವಾಗುವುದಿಲ್ಲ" ಎಂದು ಟ್ರಂಪ್ ಅಟ್ಲಾಂಟಾದಲ್ಲಿ ನಡೆದ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ.
"ಮಾತನಾಡುವುದರಲ್ಲಿ ತಪ್ಪೇನಿದೆ? ಇದನ್ನು ಸೌಹಾರ್ದತೆ ಬೆಳೆಸಲು ಮಾತುಕತೆ ಎನ್ನಲಾಗುತ್ತದೆ" ಎಂದಿರುವ ಅವರು ಈ ಭೇಟಿ ಸಾಧ್ಯವಾಗದೆ ಕೂಡ ಇರಬಹುದು ಎಂದು ಕೂಡ ಅವರು ಊಹಿಸಿದ್ದಾರೆ.