ಚಿನ್ನಲೇಪಿತ ಟೈರ್ ಗಳು 
ವಿದೇಶ

ಬರೋಬ್ಬರಿ 4 ಕೋಟಿ. ರುಪಾಯಿಗೆ ಮಾರಾಟವಾದ ಕಾರ್ ಟೈರ್ ಗಳು!

ಕಾರುಗಳ ಟೈರ್ ಗಳ ಬೆಲೆ ಹೆಚ್ಚೆಂದರೆ ಕೆಲವು ಸಾವಿರ ಇರಬಹುದು. ಆದರೆ ಈ 4 ಟೈರ್‌ಗಳು ಬರೋಬ್ಬರಿ 4 ಕೋಟಿ ರೂ.ಗೆ ಮಾರಾಟವಾಗಿದೆ...

ದುಬೈ: ಕಾರುಗಳ ಟೈರ್ ಗಳ ಬೆಲೆ ಹೆಚ್ಚೆಂದರೆ ಕೆಲವು ಸಾವಿರ ಇರಬಹುದು. ಆದರೆ ಈ 4 ಟೈರ್‌ಗಳು ಬರೋಬ್ಬರಿ 4 ಕೋಟಿ ರೂ.ಗೆ ಮಾರಾಟವಾಗಿದೆ.

ಏನಪ್ಪಾ ಈ ಟೈರ್ ಗಳ ವಿಶೇಷ ಏನಂತೀರಾ, 24 ಕ್ಯಾರೆಟ್‌ ಚಿನ್ನ ಮತ್ತು ವಿಶೇಷವಾದ ವಜ್ರಗಳನ್ನು ಹೊಂದಿರುವ ನಾಲ್ಕು ಟಯರ್‌ಗಳನ್ನು ದುಬೈನ "ಝಡ್‌ ಟಯರ್‌' ತಯಾರಿಸಿದೆ.

ಸದ್ಯ ದುಬೈನಲ್ಲಿ ನಡೆಯುತ್ತಿರುವ ಆರ್‌ಇಐಎಫ್ಇಎನ್‌ ಜಾಗತಿಕ ಟಯರ್‌ ಮೇಳದಲ್ಲಿ ಇವುಗಳು 4.01 ಕೋಟಿ ರೂ.ಗಳಿಗೆ ಮಾರಾಟ ಮಾಡಿದೆ. ಜಗತ್ತಿನ ಪ್ರಖ್ಯಾತ ಅಕ್ಕಸಾಲಿಗರು, ಇಟಲಿಯ ಆರ್ಟಿಸನ್ ಜ್ಯುವೆಲ್ಲರಿ ವಿನ್ಯಾಸಕಾರರು ದುಬೈನಲ್ಲಿ ಈ ಟಯರ್‌ ಗಳನ್ನು ತಯಾರಿಸಿದ್ದಾರೆ.

ಈ ದುಬಾರಿ ಟಯರ್‌ಗಳು ಇದೀಗ ಗಿನ್ನೆಸ್‌ ದಾಖಲೆ ಪುಸ್ತಕದಲ್ಲಿ "ಜಗತ್ತಿನ ಅತಿ ದುಬಾರಿ ಟಯರ್‌' ಎಂದು ಸ್ಥಾನ ಪಡೆದಿವೆ.

ಝೆಡ್ ಟೈರ್ಸ್ ಸಂಸ್ಥೆ ಟೈರ್ ಮಾರಿದ ಹಣವನ್ನು ಜಾಗತಿಕ ಶಿಕ್ಷಣ ಸುಧಾರಣೆಗೆ ಕೆಲಸ ಮಾಡುವ ಜೆನಿಸಸ್ ಫೌಂಡೇಶನ್ ಗೆ ಕೊಡಲು ನಿರ್ಧರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಮುಂದಿನ CM ಡಿ.ಕೆ ಶಿವಕುಮಾರ್; ಮಧ್ಯಾಹ್ನ 2.30ಕ್ಕೆ ರಾಜೀನಾಮೆ; ಸಿದ್ದರಾಮಯ್ಯ ಮಾಹಿತಿ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT