ಇಸ್ಲಾಮಾಬಾದ್: 26/11ರ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ತನ್ನ ಖ್ಯಾತೆ ಮುಂದುವರೆಸಿರುವ ಪಾಕಿಸ್ತಾನ ಮತ್ತಷ್ಟು ಸಾಕ್ಷ್ಯಾ ನೀಡುವಂತೆ ಕೋರಿದೆ.
ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಮುಗಿಸಲು ಹೆಚ್ಚುವರಿ ಸಾಕ್ಷಿಗಳನ್ನು ಒದಗಿಸುವಂತೆ ಭಾರತಕ್ಕೆ ಕೇಳಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
2008ರ ದಾಳಿಗೆ ಸಂಬಂಧ ಆರೋಪಿಗಳಾದ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಜಕೀ ಉರ್ ರೆಹಮಾನ್ ಲಖ್ವಿ ಮತ್ತು 6 ಜನರ ವಿರುದ್ಧ ವಿಚಾರಣೆ ನಡೆಯುತ್ತಿದೆ. ಪ್ರಕರಣದ ವಿಚಾರಣೆಯನ್ನು ಶೀಘ್ರ ಅಂತ್ಯಗೊಳಿಸುವ ಸಂಬಂಧ ಹೆಚ್ಚಿನ ಸಾಕ್ಷಿ ಒದಗಿಸುವಂತೆ ಭಾರತಕ್ಕೆ ಕೋರಿದೆ.
ಮುಂಬೈ ದಾಳಿ ಸಂಬಂಧ ಪಾಕಿಸ್ತಾನ 7 ಲಷ್ಕರ್ ಉಗ್ರರನ್ನು ಬಂಧಿಸಿ ಕಳೆದ 6 ವರ್ಷಗಳಿಂದ ವಿಚಾರಣೆ ನಡೆಸುತ್ತಿದೆ.