ವಿದೇಶ

ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಕೈತಪ್ಪಲು ಅವಕಾಶ ನೀಡುವುದಿಲ್ಲ: ಅಮೆರಿಕ

Srinivas Rao BV

ವಾಷಿಂಗ್ ಟನ್: ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಕೈತಪ್ಪಿದ ನಂತರವೂ ಭಾರತದ ಪರ ನಿಲುವು ಪ್ರಕಟಿಸುವುದನ್ನು ಮುಂದುವರೆಸಿರುವ ಅಮೆರಿಕ, ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಕೈ ತಪ್ಪಲು ಬಿಡುವುದಿಲ್ಲ ಎಂದು ಹೇಳಿದೆ.

ಭಾರತ ಎನ್ ಎಸ್ ಜಿ ಸದಸ್ಯತ್ವ ಪಡೆಯಲು ಹೆಚ್ಚಿನ ಅರ್ಹತೆ ಹೊಂದಿದೆ, ಆದ್ದರಿಂದ ಸದಸ್ಯತ್ವ ಕೈತಪ್ಪಲು ಅಮೆರಿಕ ಅವಕಾಶ ನೀಡುವುದಿಲ್ಲ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಜಾನ್‌ ಕಿರ್ಬಿ ಭರವಸೆ ನೀಡಿದ್ದಾರೆ. ಭಾರತಕ್ಕೆ ಸದಸ್ಯತ್ವ ನೀಡುವುದನ್ನು ಬೆಂಬಲಿಸುವ ವಿಚಾರದಲ್ಲಿ ಶ್ವೇತ ಭವನ ಹಾಗೂ ಅಮೆರಿಕದ ಅಧಿಕಾರಿಗಳು ಸಂಘಟಿತ ಪ್ರಯತ್ನ ನಡೆದ್ದಾರೆ ಎಂದು ಜಾನ್ ಕಿರ್ಬಿ ಮಾಹಿತಿ ನೀಡಿದ್ದಾರೆ.

ಎಂಟಿಸಿಆರ್ ನ ಸದಸ್ಯತ್ವಕ್ಕೆ ಅಡ್ಡಗಾಲು ಹಾಕದ ಚೀನಾ ಎನ್ ಎಸ್ ಜಿ ಸದಸ್ಯತ್ವಕ್ಕೆ ಮಾತ್ರ ಏಕೆ ಅಡ್ಡಗಾಲು ಹಾಕುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಕೈತಪ್ಪಿರುವುದಕ್ಕೆ ಅಮೆರಿಕಗೆ ಬೇಸರ ಉಂಟಾಗಿದೆ, ಆದರೆ ಭಾರತಕ್ಕೆ ಎಂದಿಗೂ ಅಮೆರಿಕ ಬೆಂಬಲಿಸಲಿದೆ ಎಂದು ಜಾನ್ ಕಿರ್ಬಿ ಹೇಳಿದ್ದಾರೆ.

SCROLL FOR NEXT