ವಾಷಿಂಗ್ ಟನ್: ಪಠಾಣ್ ಕೋಟ್ ದಾಳಿ ಪ್ರಕರಣದ ಬಗ್ಗೆ ತನಿಖೆ ನಡೆಸಲು ಪಾಕ್ ತನಿಖಾ ತಂಡ ಪಠಾಣ್ ಕೋಟ್ ಗೆ ಭೇಟಿ ನೀಡಿದ ಬಳಿಕ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ ಎಂದು ಪಾಕ್ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಹೇಳಿದ್ದಾರೆ.
ಅಮೆರಿಕಗೆ ಭೇಟಿ ನೀಡಿರುವ ಸರ್ತಾಜ್ ಅಜೀಜ್ , ಪಾಕಿಸ್ತಾನ ತನಿಖಾ ತಂಡ ಕೆಲವೇ ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದೆ, ಇದಾದ ಬಳಿಕ ಭಾರತ- ಪಾಕ್ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಪಠಾಣ್ ಕೋಟ್ ದಾಳಿ ಭಾರತ- ಪಾಕ್ ದ್ವಿಪಕ್ಷೀಯ ಮಾತುಕತೆ ಮೇಲೆ ಪರಿಣಾಮ ಬೀರಿಸುವುದು ದುರದೃಷ್ಟಕರ, ದಾಳಿಯ ನಂತರ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿದ್ದ ಪಾಕ್ ಪ್ರಧಾನಿ ನವಾಜ್ ಷರೀಫ್ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದರು, ಭಾರತ- ಪಾಕ್ ದ್ವಿಪಕ್ಷೀಯ ಮಾತುಕತೆ ಪುನಾರಂಭಗೊಳ್ಳುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ಪಾಕಿಸ್ತಾನ ಕೈಗೊಂಡಿದೆ ಎಂದು ಸರ್ತಾಜ್ ಅಜೀಜ್ ತಿಳಿಸಿದ್ದಾರೆ.