ವಿದೇಶ

ಅಮೆರಿಕದ ಸ್ಥಳೀಯ ಚುನಾವಣೆ: 8 ಭಾರತೀಯ-ಅಮೆರಿಕನ್ನರ ಪೈಕಿ 7 ಅಭ್ಯರ್ಥಿಗಳಿಗೆ ಜಯ

Srinivas Rao BV

ವಾಷಿಂಗ್ ಟನ್: ಅಮೆರಿಕದ ಕೆಂಟುಕಿ ರಾಜ್ಯದ ಲೆಕ್ಸಿಂಗ್ಟನ್ ನಗರದ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 8 ಭಾರತೀಯ-ಅಮೆರಿಕನ್ನರ ಪೈಕಿ 7 ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಚುನಾವಣಾ ಫಲಿತಾಂಶದಿಂದ ಈಗ ಲೆಕ್ಸಿಂಗ್ಟನ್ ನಗರವನ್ನು ಪ್ರತಿನಿಧಿಸುವ ಭಾರತಿಯ ಅಮೆರಿಕನ್ನರ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ ಎಂದು ನ್ಯೂ ಇಂಗ್ಲೆಂಡ್ ನ್ಯೂಸ್ ವರದಿ ಮಾಡಿದೆ.
ಇದೊಂದು ಐತಿಹಾಸಿಕ ಘಳಿಗೆ, ಸಾಮಾನ್ಯವಾಗಿ ಅಧ್ಯಕ್ಷೀಯ ಚುನಾವಣೆ ಆಸುಪಾಸಿನಲ್ಲಿ ನಡೆಯುವ ಸ್ಥಳೀಯ ಚುನಾವಣೆಗಳು, ಗುರುತಿರುವ ಅಥವಾ ಈಗಾಗಲೇ ಅಧಿಕಾರದಲ್ಲಿದ್ದ ಅಭ್ಯರ್ಥಿಗಳಿಗ ಪರವಾಗಿರುತ್ತವೆ.  ಆದರೆ ಈ ಚುನಾವಣೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ 8 ಭಾರತೀಯ ಅಮೆರಿಕನ್ನರ ಪೈಕಿ 7 ಜನರು ಗೆದ್ದಿರುವುದು ವಿಶೇಷವಾಗಿದೆ ಎಂದು ಲೆಕ್ಸಿಂಗ್ಟನ್ ನಿವಾಸಿಯಾದ ನರೇನ್ ಭಾಟಿಯಾ ಅಭಿಪ್ರಾಯಪಟ್ಟಿದ್ದಾರೆ.
ಲೆಕ್ಸಿಂಗ್ಟನ್ ಉಪವಿಭಾಗ-3  ರಿಂದ ಶರ್ಮಿಳಾ ಮುದ್ಗಲ್ ( ಒಂದು ವರ್ಷ ಅವಧಿ) ಉಪವಿಭಾಗ-4 ರಿಂದ ಅನೂಪ್ ಗರ್ಗ್(ಮೂರು ವರ್ಷ ಅವಧಿ) ಉಪವಿಭಾಗ-9 ರಿಂದ ಪಾಮ್ ಜೋಶಿ ಮತ್ತು 5 ರಿಂದ ರೀಟಾ ಪಾಂಡೆ ಮೂರು ವರ್ಷ ಅವಧಿಗೆ ಆಯ್ಕೆಗೊಂಡಿದ್ದರೆ, ಉಪವಿಭಾಗ-6 7 ,8 ರಿಂದ ಕ್ರಮವಾಗಿ ಅನಿಲ್ ಅಹುಜಾ,  ವಿಕಾಸ್, ನಿರ್ಮಲಾ ಒಂದು ವರ್ಷದ ಅವಧಿಗೆ ಆಯ್ಕೆಗೊಂಡಿದ್ದಾರೆ. ಹೇಮಾ ಭಟ್ ಚುನಾವಣೆಯಲ್ಲಿ ಪರಾಭವಗೊಂಡ ಏಕೈಕ ಭಾರತೀಯ ಅಮೆರಿಕನ್ನರಾಗಿದ್ದಾರೆ.

SCROLL FOR NEXT