ನವದೆಹಲಿ: ಜಾಗತಿಕ ಆರ್ಥಿಕತೆ ಸಂಕಷ್ಟದಲ್ಲಿದ್ದರೂ ಭಾರತ ಪ್ರಕಾಶಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಮುಖ್ಯಸ್ಥೆ ಕ್ರಿಸ್ಟಿನ್ ಲಗಾರ್ಡ್ ಹೇಳಿದ್ದಾರೆ.
'ಅಡ್ವಾನ್ಸಿಂಗ್ ಏಷ್ಯಾ' ಶೃಂಗ ಸಭೆಯಲ್ಲಿ ಮಾತನಾಡಿದ ಅವರು, ಜಾಗತಿಕ ಆರ್ಥಿಕತೆಯ ಕೆಲವು ಮಿನುಗು ತಾರೆಗಳ ಪೈಕಿ ಭಾರತವೂ ಒಂದು. ಅತಿ ವೇಗವಾಗಿ ಭಾರತದ ಆರ್ಥಿಕತೆಯು ಬೆಳೆಯುತ್ತಿದ್ದು, ಜಾಗತಿಕ ಆರ್ಥಿಕತೆ ಸಂಕಷ್ಟದಲ್ಲಿದ್ದರೂ ಭಾರತ ಪ್ರಕಾಶಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಒಂದು ದಶಕ ಕಳೆಯುವಷ್ಟರಲ್ಲಿ ಭಾರತ ವಿಶ್ವದ ಪ್ರಖ್ಯಾತ ದೇಶವಾಗಿರುತ್ತದೆ. ಅಷ್ಟು ವೇಗವಾಗಿ ಭಾರತ ಆರ್ಥಿಕತೆ ಅಭಿವೃದ್ಧಿಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ, ಸಾಮರ್ಥ್ಯ ಅಭಿವೃದ್ಧಿಗಾಗಿ ತರಬೇತಿ ಮತ್ತು ತಾಂತ್ರಿಕ ಸಹಾಯಕ ಕೇಂದ್ರಗಳನ್ನು ಲಗಾರ್ಡೆ ಘೋಷಿಸಿದ್ದಾರೆ.
ಭಾರತ ಸಾಧನೆ ಮತ್ತು ಏಷ್ಯಾ ಸಾಧನೆ ಕುರಿತು ಹೇಳಲು ನನಗೆ ಸದಾವಕಾಶ ಸಿಕ್ಕಿದೆ. ಹಿಂದೆ ಭಾರತ ನಿರ್ಣಾಯಕ ಸ್ಥಿತಿಯಲ್ಲಿತ್ತು. ಈಗ ಅದರಿಂದದಾಚೆಗೆ ಬಂದು, ಬೆಳವಣಿಗೆಯತ್ತ ಮುನ್ನುಗ್ಗಿದೆ. ಉದಾಹರಣೆಗೆ, ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದ ಮೂಲಕ ಭಾರತ ಮತ್ತಷ್ಟು ಅಭಿವೃದ್ಧಿಯ ಹೊಂದುತ್ತಿದ್ದು. ಈ ಮೂಲಕ ಆರ್ಥಿಕ ಸುಧಾರಣೆಯತ್ತ ಹೆಜ್ಜೆಯಿಟ್ಟಿದೆ ಎಂದು ಅವರು ಹೇಳಿದ್ದಾರೆ.