ವಿದೇಶ

ಆರನೇ ಇಯತ್ತಿನ ವಿದ್ಯಾರ್ಥಿಯ ಮಾತಿನಂತೆ ಡೊನಾಲ್ಡ್ ಟ್ರಂಪ್ ಭಾಷಣ: ಅಧ್ಯಯನ

Guruprasad Narayana

ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭವನೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಮ್ಮ ಆಕ್ರಮಣಕಾರಿ ಭಾಷಣಗಳ ಮೂಲಕ ಅಭಿಮಾನಿಗಳನ್ನು ಗೆದ್ದಿದ್ದರು, ಅಧ್ಯಯನವೊಂದರ ಪ್ರಕಾರ ಅವರು ಬಳಸುವ ಪದಗಳು, ವ್ಯಾಕರಣ ಎಲ್ಲವೂ ಆರನೇ ತರಗತಿಯ ವಿದ್ಯಾರ್ಥಿಯ ಮಟ್ಟದ್ದು ಎನ್ನಲಾಗಿದೆ.

ಬಹುತೇಕ ಅಧ್ಯಕ್ಷೀಯ ಅಭ್ಯರ್ಥಿಗಳು ತಾವು ಬಳಸುವ ಪದಗಳು ಮತ್ತು ವ್ಯಾಕರಣ ಆರರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳ ಮಟ್ಟದ್ದು, ಆದರೆ ಡೊನಾಲ್ಡ್ ಟ್ರಂಪ್ ಇವರೆಲ್ಲರಿಗೂ ಹಿಂದುಳಿದಿದ್ದಾರೆ ಎಂದಿದೆ ಅಧ್ಯಯನ.

ಈ ಅಧ್ಯಯನಕ್ಕಾಗಿ ಕಾರ್ನಿಗೆ ಮೆಲ್ಲನ್ ವಿಶ್ವವಿದ್ಯಾಲಯದ, ಭಾಷಾ ತಂತ್ರಜ್ಞಾನ ಸಂಸ್ಥೆಯ ಸಂಶೋಧನಕಾರರು ಅಧ್ಯಕ್ಷೀಯ ಅಭ್ಯರ್ಥಿಗಳ ಭಾಷಣಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ.

ಪ್ರಚಾರ ಸಭೆಗಳು ಮುಂದುವರೆದಂತೆ, ರಿಪಬ್ಲಿಕನ್ ಅಭ್ಯರ್ಥಿಗಳಾದ ಟ್ರಂಪ್, ಟೆಡ್ ಕ್ರಜ್, ಮಾರ್ಕೋ ರೂಬಿಯೋ ಹಾಗೂ ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿಗಳಾದ ಹಿಲರಿ ಕ್ಲಿಂಟನ್ ಮತ್ತು ಬರ್ನಿ ಸ್ಯಾಂಡರ್ಸ್ ಅತಿ ಸರಳ ಭಾಷೆಯನ್ನೂ ಬಳಸುತ್ತಿದ್ದಾರೆ ಎಂದಿದೆ ಅಧ್ಯಯನ.

ಆದರೆ ಇವರೆಲ್ಲರನ್ನೂ ಮೀರಿಸಿರುವುದು ಡೊನಾಲ್ಡ್ ಟ್ರಂಪ್ ಎನ್ನುತ್ತದೆ ಅಧ್ಯಯನ. ಇವರ ಭಾಷಣಗಳಲ್ಲಿ ವ್ಯಾಕರಣ ಮತ್ತು ಪದಗಳ ಬಳಕೆಯ ದೋಷಗಳು ಅತಿ ಹೆಚ್ಚು ಎನ್ನುತ್ತದೆ.

ಹಿಂದಿನ ಅಧ್ಯಕ್ಷರಿಗೂ ಈ ಹೋಲಿಕೆಯನ್ನು ವಿಸ್ತರಿಸಿದ್ದು, ಅಬ್ರಹಾಂ ಲಿಂಕನ್ ಎಲ್ಲರಿಗೂ ಮೂಂಚೂಣಿಯಲ್ಲಿದ್ದು ತಮ್ಮ ಭಾಷಣಗಳಲ್ಲಿ ೧೧ ನೆಯ ತರಗತಿಯ ಮಟ್ಟದ ಭಾಷೆ ಬಳಸಿದ್ದರೆ, ಜಾರ್ಜ್ ಡಬ್ಲ್ಯು ಬುಶ್ ಅವರದ್ದು ೫ ನೆಯ ತರಗತಿಯ ಮಟ್ಟದ್ದಾಗಿದ್ದು, ಎಲ್ಲರಿಗಿಂತಲೂ ತಳದಲ್ಲಿದ್ದಾರೆ.

SCROLL FOR NEXT