ವಿದೇಶ

ಉ.ಕೋರಿಯಾದಿಂದ ಐದು ಅಲ್ಪಗಾಮಿ ಕ್ಷಿಪಣಿ ಉಡಾವಣೆ

Lingaraj Badiger
ಸಿಯೋಲ್: ಇತ್ತಿಚೀಗಷ್ಟೇ ನಾಲ್ಕನೇ ಅಣ್ವಸ್ತ್ರ ಪರೀಕ್ಷೆ ನಡೆಸಿ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದ್ದ ಉತ್ತರ ಕೋರಿಯಾ ಸೋಮವಾರ ವಿಶ್ವಸಂಸ್ಥೆ ನಿರ್ಬಂಧದ ನಡುವೆಯೂ ತನ್ನ ಪೂರ್ವ ಕರಾವಳಿಯಲ್ಲಿ ಐದು ಅಲ್ಪಗಾಮಿ ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿದೆ.
ಉತ್ತರ ಕೋರಿಯಾ ತನ್ನ ಅಣ್ವಸ್ತ್ರ ಹಾಗೂ ರಾಕೆಟ್ ಕಾರ್ಯಕ್ರಮಗಳಿಂದಾಗಿ ಪ್ರಕ್ಷುಬ್ಧತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದು, ಇದರಿಂದಾಗಿ ದಕ್ಷಿಣ ಕೋರಿಯಾ ಹಾಗೂ ಇತರ ರಾಷ್ಟ್ರಗಳ ಆತಂಕವನ್ನು ದುಪ್ಪಟ್ಟುಗೊಳಿಸಿದೆ.
ಉತ್ತರ ಕೋರಿಯದ ಅಧ್ಯಕ್ಷ ಕಿಮ್‌ಜೊಂಗ್ ಉನ್ ಅವರ ಆದೇಶದಂತೆ ಇಂದು ಹಮ್ಂಗ್ ನಗರದ ದಕ್ಷಿಣದಿಂದ ಈ ಕ್ಷಿಪಣಿಗಳನ್ನು ಉಡಾಯಿಸಲಾಗಿದ್ದು, ಅವು ಸುಮಾರು 200 ಕಿಮೀ (120 ಮೈಲು) ದೂರ ಚಲಿಸಿ, ಉತ್ತರ ಕೋರಿಯಾದ ಪೂರ್ವ ಸಮುದ್ರದ ನೀರಿನಲ್ಲಿ ಬಿದ್ದಿವೆ ಎಂದು ದಕ್ಷಿಣ ಕೋರಿಯಾದ ಜಂಟಿ ಸೇನಾ ಮುಖ್ಯಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಶುಕ್ರವಾರ ಉತ್ತರ ಕೋರಿಯಾ ಎರಡು ಮಧ್ಯಂತರಗಾಮಿ ಸಮರ ಕ್ಷಿಪಣಿಗಳನ್ನು ವಿಶ್ವಸಂಸ್ಥೆಯ ದಿಗ್ಬಂಧನಗಳನ್ನು ಧಿಕ್ಕರಿಸಿ ಉಡಾಯಿಸಿತ್ತು.
SCROLL FOR NEXT