ವಿದೇಶ

ಕೆಲ ಘಟನೆಗಳಿಂದ ಭಾರತವನ್ನು ಅಸಹಿಷ್ಣುತೆ ದೇಶ ಎನ್ನುವುದಿಲ್ಲ: ತಸ್ಲೀಮಾ

Mainashree
ನವದೆಹಲಿ: ಯಾವುದೋ ಕೆಲವು ಘಟನೆಗಳಿಂದ ಭಾರತದಲ್ಲಿ ಅಸಹಿಷ್ಣುತೆ ಇದೆ ಎನ್ನುವುದು ಸರಿಯಲ್ಲ ಎಂದು ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ ಹೇಳಿದ್ದಾರೆ.
ಭಾರತ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ನಾನು ಭಾವಿಸುವುದಿಲ್ಲ ಎಂದ ಅವರು, ದಾದ್ರಿ ಪ್ರಕರಣ, ನರೇಂದ್ರ ದಾಬೋಲ್ಕರ್, ಕಲಬುರ್ಗಿ ಹತ್ಯೆ ಪ್ರಕರಣಗಳು ಅಸಹಿಷ್ಣುತೆ ಪ್ರಕರಣಗಳಲ್ಲ. ಇವು ಘೋರ ಅಪರಾಧಗಳು ಎಂದಿದ್ದಾರೆ. 
ಗೋಮಾಂಸ ಸೇವಿಸುವವರನ್ನು ಕೊಲ್ಲುವುದು ಒಂದು ಅಪರಾಧ ಹೊರತು. ಅಂತಹ ಕೆಲವು ಘಟನೆಗಳಿಂದ ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಕರೆಯಲು ನಾನು ಇಚ್ಛಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. 
ಎಲ್ಲ ಕಡೆಯೂ ಅಸಹಿಷ್ಣುತೆ ಜನರಿರುತ್ತಾರೆ. ಹಾಗಂತ ಇಡೀ ದೇಶದಲ್ಲಿ ಅಸಹಿಷ್ಣುತೆ ಇದೆ ಎನ್ನುವುದು ಸರಿಯಲ್ಲ. ಭಾರತದಲ್ಲಿರುವ ಕಾನೂನುಗಳು ಅಸಹಿಷ್ಣುತೆಯನ್ನು ಪ್ರೋತ್ಸಾಹಿಸುವುದಿಲ್ಲ. ಆದರೆ, ಕೆಲವು ಜನರು ಅಸಹಿಷ್ಣುಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
SCROLL FOR NEXT