ವಿದೇಶ

ಗುಡ್ ಫ್ರೈಡೇ ದಿನದಂದೇ ಫಾದರ್ ರನ್ನು ಶಿಲುಬೆಗೇರಿಸಿದ ಐಸಿಸ್ ಉಗ್ರರು: ವರದಿ

Lingaraj Badiger
ಯೆಮೆನ್: ಯೆಮನ್‌ನಲ್ಲಿ ಐಸಿಸ್‌ಉಗ್ರರರಿಂದ ಅಪಹರಣಕ್ಕೆ ಒಳಗಾಗಿದ್ದ ಬೆಂಗಳೂರು ಮೂಲದ ಕ್ರೈಸ್ತ ಪಾದ್ರಿ ಟಾಮ್ ಉಳುನ್ನಲಿಲ್‌ ಅವರನ್ನು ಗುಡ್ ಫ್ರೈಡೇ ದಿನದಂದೇ ಶಿಲುಬೆಗೇರಿಸಿದ್ದಾರೆ ಎಂದು ವಾಷಿಂಗ್ಟನ್ ಟೈಮ್ಸ್ ವರದಿ ಮಾಡಿದೆ. ಆದರೆ ಐಸಿಸ್ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ, ವಿಡಿಯೋ ವನ್ನು ಬಿಡುಗಡೆ ಮಾಡಿಲ್ಲ.
ಜೀಸಸ್ ನನ್ನು ಶಿಲುಬೆಗೇರಿಸಿದ ದಿನವನ್ನು ಪ್ರತಿವರ್ಷ ಗುಡ್ ಫ್ರೈಡೇ ಎಂದು ಆಚರಿಸಲಾಗುತ್ತಿದೆ. ಇದೀಗ ಐಸಿಸ್ ಉಗ್ರರು ಫಾ.ಟಾಮ್ ಅವರನ್ನು ಕೂಡಾ ಗುಡ್ ಫ್ರೈಡೇಯಂದು ಶಿಲುಬೆಗೇರಿಸಿರುವುದಾಗಿ ವರದಿ ವಿವರಿಸಿದೆ. ಐಸಿಸ್ ಉಗ್ರರು ಗುಡ್ ಫ್ರೈಡೆಯಂದು ಪಾದ್ರಿಗೆ ಚಿತ್ರಹಿಂಸೆ ನೀಡಿ ಬಳಿಕ ಶಿಲುಬೆಗೇರಿಸಲಿದ್ದಾರೆ ಎಂದು ಆಂಗ್ಲ ಮಾಧ್ಯಮ, ಅಂತರ್ಜಾಲದಲ್ಲಿ ಸುದ್ದಿ ಹರಿದಾಡಿತ್ತು.
ಮಾ. 4ರಂದು ಏಡನ್‌ನ ವೃದ್ಧಾಶ್ರಮವೊಂದರ ಮೇಲೆ ದಾಳಿ ನಡೆಸಿದ್ದ ನಾಲ್ವರು ಉಗ್ರರ ತಂಡ, ನಾಲ್ವರು ಭಾರತೀಯರು ಸಹಿತ 15 ಜನರನ್ನು ಹತ್ಯೆ ಮಾಡಿತ್ತು. ಈ ವೇಳೆ ಅದೇ ವೃದ್ಧಾಶ್ರಮದಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇರಳ ಮೂಲದವರಾದ ಬೆಂಗಳೂರಿನ ಡಾನ್‌ಬಾಸ್ಕೋ ಸಂಸ್ಥೆಯ ಪಾದ್ರಿ ಟಾಮ್‌ ಉಳುನ್ನಲಿಲ್‌ ಅವರನ್ನು ಅಪಹರಿಸಲಾಗಿತ್ತು.
SCROLL FOR NEXT