ವಿದೇಶ

ಮಯನ್ಮಾರ್ ಅಧ್ಯಕ್ಷರಾಗಿ ಯು ಟಿನ್ ಕ್ಯಾವ್ ಅಧಿಕಾರ ಸ್ವೀಕಾರ

Srinivas Rao BV

ಮಯನ್ಮಾರ್: ಮಯನ್ಮಾರ್ ನ ಅಧ್ಯಕ್ಷರಾಗಿ ಯು ಟಿನ್ ಕ್ಯಾವ್ ಮಾ.30 ರಂದು ಅಧಿಕಾರ ಸ್ವೀಕರಿಸಿದ್ದಾರೆ. ಮಯನ್ಮಾರ್ ನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಚುನಾಯಿತ ಸಂಸತ್ ನ ಜಂಟಿ ಅಧಿವೇಶನದಲ್ಲಿ ಇಬ್ಬರು ಉಪಾಧ್ಯಕ್ಷರೊಂದಿಗೆ ಯು ಟಿನ್ ಕ್ಯಾವ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.  

50 ವರ್ಷಗಳ ಸೇನೆಯ ಆಡಳಿತದ ನಂತರ ಮಯನ್ಮಾರ್ ನ್ನು ಮುನ್ನಡೆಸುವ ಪ್ರಥಮ ಅಧ್ಯಕ್ಷರಾಗಿ ಯು ಹ್ತೀನ್ ಕ್ಯು ಆಯ್ಕೆಯಾಗಿದ್ದಾರೆ. ಯು ಟಿನ್ ಕ್ಯಾವ್ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ನಾಯಕಿ ಆಂಗ್ ಸಾನ್ ಸೂಕಿ ಅವರ ಆಪ್ತರಾಗಿದ್ದು, ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ ನವೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಗಳಿಸಿತ್ತು.

SCROLL FOR NEXT