ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಚೀನಾದಲ್ಲಿ ಕಾಲೇಜು ಪ್ರವೇಶ ಪರೀಕ್ಷೆ ಬರೆಯಲಿದೆ ರೋಬೋಟ್

ಚೀನಾದ ರೋಬೋಟ್‌ ವೊಂದು ವಿದ್ಯಾರ್ಥಿಗಳೊಂದಿಗೆ ರಾಷ್ಟ್ರೀಯ ಕಾಲೇಜು ಪ್ರವೇಶ ಪರೀಕ್ಷೆಯನ್ನು ಬರೆಯುವ ಮೂಲಕ 2017 ರ ಶೈಕ್ಷಣಿಕ ವರ್ಷ ದಲ್ಲಿ 12ನೇ..

ಸಾಂದರ್ಭಿಕ ಚಿತ್ರ
Rashmi Kasaragodu
Updated On : 7 May 2016, 12:41 pm
ಬೀಜಿಂಗ್‌ :ಚೀನಾದ ರೋಬೋಟ್‌ ವೊಂದು ವಿದ್ಯಾರ್ಥಿಗಳೊಂದಿಗೆ  ರಾಷ್ಟ್ರೀಯ ಕಾಲೇಜು ಪ್ರವೇಶ ಪರೀಕ್ಷೆಯನ್ನು ಬರೆಯುವ ಮೂಲಕ  2017 ರ ಶೈಕ್ಷಣಿಕ ವರ್ಷ ದಲ್ಲಿ 12ನೇ ತರಗತಿಯನ್ನು ಪೂರ್ತಿಗೊಳಿಸಲಿದೆ. ಈ ಪ್ರವೇಶ ಪರೀಕ್ಷೆ ತೇರ್ಗಡೆಯಾಗಿ ಚೀನಾದ ಮೊದಲ ಶ್ರೇಣಿಯ ವಿಶ್ವವಿದ್ಯಾಲಯದಲ್ಲಿ ಸ್ಥಾನ ಗಳಿಸಲು ರೋಬೊಟ್‌ ಸಿದ್ಧವಾಗಿದೆ.
ಗಣಿತ, ಚೈನೀಸ್ ಭಾಷೆ ಮತ್ತು ಇತಿಹಾಸ, ರಾಜಕೀಯ ಮತ್ತು ಭೌಗೋಳಿಕ ವಿಷಯವನ್ನೊಳಗೊಂಡ ಸಮಗ್ರ ಪರೀಕ್ಷೆ ಬರೆಯಲು ಸಾಧ್ಯವಾಗುವಂತೆ ರೋಬೊಟನ್ನು ವಿನ್ಯಾಸಗೊಳಿಸಲಾಗಿದೆ ಎಂದು ಚೆಗಡುನಲ್ಲಿರುವ ಕೃತಕ ಬುದ್ಧಿಮತ್ತೆ ಕಂಪನಿಯೊಂದರ ಸಿಇ ಲಿನ್ ಹುಯಿ ಹೇಳಿದ್ದಾರೆ.
ಇತರೆ ವಿದ್ಯಾರ್ಥಿಗಳಂತೆ ರೋಬೋಟ್‌ ಸಹ ನಿಗದಿತ ಸಮಯದೊಳಗೆ ಪರೀಕ್ಷೆಯನ್ನು ಮುಗಿಸಲಿದೆ. 

Advertisement

Advertisement

ಪರೀಕ್ಷೆ ಬರೆಯುವವರೆಗೂ ಈ ರೋಬೋಟ್‌ನಿಂದ ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗುವುದು ಮತ್ತು ಔಟ್ ಪುಟ್ ನ್ನು ಪ್ರಿಂಟರ್ ನಲ್ಲಿ ಪ್ರಿಂಟ್  ಮಾಡಲಾಗುವುದು
ಮೇಲ್ವಿಚಾರಕರು ಮತ್ತು ನೋಟರಿಯ ಮುಂದೆ ಕುಳಿತು ಈ ರೋಬೋಟ್ ಪರೀಕ್ಷೆ ಬರೆಯಲಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments