ನವದೆಹಲಿ: ಬೆಲ್ಜಿಯಂ ಯುವತಿಗೆ ಓಲಾ ಕ್ಯಾಬ್ ಚಾಲಕ ಲೈಂಗಿಕ ಕಿರುಕುಳ ನೀಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
23 ವರ್ಷದ ಬೆಲ್ಜಿಯಂ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿದೇಶಿ ಯುವತಿ ಗುರಗಾಂವ್ ನಿಂದ ಸಿಆರ್ ಪಾರ್ಕ್ ವರೆಗೆ ಓಲಾ ಕ್ಯಾಬ್ ಬುಕ್ ಮಾಡಿದ್ದರು.
ಆಕೆಯನ್ನು ಪಿಕ್ ಮಾಡಿದ ಓಲಾ ಕ್ಯಾಬ್ ಚಾಲಕ ಮದ್ಯ ದಾರಿಯಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಸಂಬಂಧ ವಿದೇಶಿ ಯುವತಿ ಸಿಆರ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನಲ್ಲಿ ಕ್ಯಾಬ್ ನಲ್ಲಿ ಬರಬೇಕಾದರೆ ಮದ್ಯ ದಾರಿಯಲ್ಲಿ ನನಗೆ ಆತ ಚುಂಬಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ. ತದ ನಂತರ ನನ್ನನ್ನು ಸಿಆರ್ ಪಾರ್ಕ್ ನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾಳೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಬುಕ್ಕಿಂಗ್ ವಿವರವನ್ನು ಪಡೆದಿದ್ದು, ಆರೋಪಿಯನ್ನು ಪತ್ತೆಗೆ ಜಾಲ ಬೀಸಿದ್ದಾರೆಂದು ದೆಹಲಿ ಡಿಸಿಪಿ ಹೇಳಿದ್ದಾರೆ.